ಕೋಲ್ಕತ್ತಾ,ಅ.24(DaijiworldNews/TA):ಡಾನಾ ಚಂಡಮಾರುತದಿಂದ ಒಡಿಶಾ ಬಂಗಾಳದ ಜನತೆ ಜೀವನ ಅಸ್ತವ್ಯಸ್ತವಾಗಿದೆ. ಬಲವಾಗಿ ಗಾಳಿ ಬೀಸುತ್ತಿರುವ ಹಿನ್ನೆಲೆ ಸರ್ಕಾರ ಅನೇಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಇದೀಗ ರೈಲುಗಳನ್ನು ರಕ್ಷಿಸುವ ಸಲುವಾಗಿ ಹಳಿಯಿಂದ ರೈಲು ಜಾರದಂತೆ ಸರಪಳಿ ಮತ್ತು ಬೀಗಗಳ ಸಹಾಯದಿಂದ ರೈಲನ್ನು ಹಳಿಗೆ ಕಟ್ಟಲಾಗಿದೆ.
ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ರೈಲನ್ನು ಹಳಿಗೆ ಕಟ್ಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ. ಸರಪಳಿ ಮತ್ತು ಬೀಗಗಳ ಸಹಾಯದಿಂದ ರೈಲನ್ನು ಕಟ್ಟಿ ಭದ್ರಗೊಳಿಸಲಾಗಿದೆ.
ಮಂಗಳವಾರ ಸಂಜೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಅಕ್ಟೋಬರ್ 25ರ ಮುಂಜಾನೆ ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟಿ 100-110 ಮೈಲಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.