ಬೆಂಗಳೂರು, ಅ.23(DaijiworldNews/AA): ಒಂದಷ್ಟು ದಿನ ವಿಶ್ರಾಂತಿ ತಗೆದುಕೊಳ್ಳುವಂತೆ ತನಗೆ ನಿರ್ದೇಶನ ನೀಡಲಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ಧಾಂತಗಳು ಮುಖ್ಯ. ವ್ಯಕ್ತಿ ಮುಖ್ಯವಲ್ಲ. ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹೊಸಬರಲ್ಲ. ಅವರ ವಿಷಯದಲ್ಲಿ ಪಕ್ಷ ತೆಗೆದುಕೊಂಡಿರುವ ನಿರ್ಣಯಕ್ಕೆ ತಾನು ಸೇರಿದಂತೆ ಎಲ್ಲರೂ ಬದ್ಧರಾಗಿದ್ದರೆ ಎಂದರು.
ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಿಂದ ಡಿಕೆ ಸುರೇಶ್ ಹಿಂದೆಸರಿದಿದ್ದಾರೆ. ಆದರೆ ವರಿಷ್ಟರು ಹೇಳಿರುವುದಕ್ಕೆ ಬದ್ಧವಾಗಿಯೋ ಅಥವಾ ಖುದ್ದು ಸುರೇಶ್ ರಾಜಕೀಯದಿಂದ ದೂರವಾಗಿದ್ದಾರೋ ಗೊತ್ತಾಗುತ್ತಿಲ್ಲ.