ಬೆಂಗಳೂರು, ಅ.23(DaijiworldNews/AK): ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಲ್ಲಿ ಆಶ್ಚರ್ಯ ಪಡುವುದು ಏನು ಇಲ್ಲ. ಇದು ನಿರೀಕ್ಷಿತವೇ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಯಾವಾಗ ಬಿಜೆಪಿ ಪರಿಷತ್ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ಕೊಟ್ಟರೋ ಆಗಲೇ ರಾಜಕೀಯ ವಿದ್ಯಮಾನಗಳ ಬೆಳವಣಿಗೆ ಬಗ್ಗೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುತ್ತಾರೆ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವಿಲ್ಲ ಎಂದರು.
ಚನ್ನಪಟ್ಟಣಕ್ಕೆ ನನ್ನ ಹೆಸರು ಚಾಲ್ತಿಯಲ್ಲಿದೆ. ಪಕ್ಷದ ಕಾರ್ಯಕರ್ತರು ನಿಖಿಲ್ಗೆ ಟಿಕೆಟ್ ಸಿಕ್ಕರೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಾನು ಸ್ಪರ್ಧೆ ಮಾಡೋದಕ್ಕೆ ಧೈರ್ಯದ ಪ್ರಶ್ನೆ ಅಲ್ಲ. ಯಾವುದೇ ಸ್ಪರ್ಧೆ ಅಂತಿಮವಾಗಬೇಕಾದರೆ ಎನ್ಡಿಎ ಕಡೆಯಿಂದ ಘೋಷಣೆ ಆಗಬೇಕಿದೆ ಎಂದರು.
ಕುಮಾರಸ್ವಾಮಿ ಅವರು ನಿನ್ನೆ ಹೇಳಿದ್ದಾರೆ ತಾಳಿದವನು ಬಾಳಿಯಾನು ಎಂದು ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.. ಅಭ್ಯರ್ಥಿ ಯಾರು ಅಂತ ಎನ್ಡಿಎ ಘೋಷಣೆ ಮಾಡುತ್ತದೆ ಎಂದು ತಿಳಿಸಿದರು.