ಬೆಂಗಳೂರು, ಅ.21(DaijiworldNews/AK):ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕುರಿತು ನಗರದಲ್ಲಿ ಮಾತನಾಡಿದ ಅವರು, ಹೆಚ್ಚುಕಡಿಮೆ ಎಲ್ಲಾ ಫೈನಲ್ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ ಅವರು ನೋಡಿಕೊಳ್ತಾರೆ ಎಂದರು.
ನಮ್ಮ ಪ್ರಸ್ತಾವನೆಯನ್ನ ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಭಾನುವಾರ ಸಿಎಂ ನಿವಾಸದಲ್ಲಿ ಸಚಿವರ ಸಭೆಯಲ್ಲೇ ಆಲ್ಮೋಸ್ಟ್ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ.
ಡಿ.ಕೆ.ಸುರೇಶ್ ಸ್ಪರ್ಧೆಗೆ ನಮ್ಮ ಕಾರ್ಯಕರ್ತರು ಹೇಳ್ತಾ ಇದ್ದಾರೆ. ಆದ್ರೆ ಪಾರ್ಟಿ ಹೈಕಮಾಂಡ್ ಏನು ಹೇಳುತ್ತೆ ಅದೇ ಫೈನಲ್. ಲೋಕಸಭಾ ಚುನಾವಣೆ ಶಾಕ್ನಿಂದ ನಾವು ಇನ್ನೂ ಹೊರಬಂದಿಲ್ಲ. ಸುರೇಶ್ ಅವರ ಸೋಲು ನಮಗೆ ಆಘಾತ ತಂದಿದೆ ಎಂದು ಹೇಳಿದರು.