ಕಲಬುರಗಿ, ಅ.21(DaijiworldNews/AA): ಆದರೆ ಸುಖಾಸುಮ್ಮನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ನಾನು ಸುಮ್ಮನಿರಲ್ಲ. ತೀಕ್ಷ್ಣ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಪ್ರಿಯಾಂಕ್ ಖರ್ಗೆ-ತ್ರಿಮೂರ್ತಿಗಳು ಸೇರಿ ಚಿಂಚೋಳಿ ಬಳಿಯಿರುವ ತನ್ನ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಅವರೆಲ್ಲ ಏನೇ ಮಾತಾಡುವುದಿದ್ದರೆ ತನ್ನ ಬಗ್ಗೆ ಮಾತಾಡಲಿ. ಆದರೆ ಸುಖಾಸುಮ್ಮನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ತಾನುನು ಸುಮ್ಮನಿರಲ್ಲ, ತೀಕ್ಷ್ಣ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತೆ ಎಂದು ಕಿಡಿಕಾರಿದ್ದಾರೆ.
ಮುಡಾದಿಂದ ಅಲಾಟ್ ಆಗಿದ್ದ ಸೈಟುಗಳು ಅಕ್ರಮವಾಗಿ ಪಡೆದಿರಲಿಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವುಗಳನ್ನು ವಾಪಸ್ಸು ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಹಿಂದೆ ಸರ್ಕಾರದಿಂದ ಪಡೆದ ಪ್ರಶಸ್ತಿ, ಪುರಸ್ಕಾರಗಳನ್ನು ಕೆಲ ಬುದ್ಧಿಜೀವಿಗಳು ವಾಪಸ್ಸು ಮಾಡುತ್ತಿದ್ದರು. ಅದರಂತೆ ಈಗ ಸೈಟು, ಜಮೀನುಗಳನ್ನು ವಾಪಸ್ಸು ಮಾಡುವ ಅಭಿಯಾನ ಶುರುವಾಗಿದೆ. ಎಲ್ಲರೂ ಕಳ್ಳರೇ ಎಂದಿದ್ದಾರೆ.