ಮಂಡ್ಯ, ಅ.18(DaijiworldNews/AA): ಮುಡಾ ಹಗರಣದಲ್ಲಿ ನ್ಯಾಯಯುತ ತನಿಖೆ ಆಗಲಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ನ್ಯಾಯಯುತವಾಗಿ ತನಿಖೆಯಾಗಲು ಹೇಗೆ ಸಾಧ್ಯ? ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿದ್ದು ಅವರೆಲ್ಲ ಸರ್ಕಾರ ಅಥವಾ ಸಿದ್ದರಾಮಯ್ಯ ಪರ ಇರುತ್ತಾರೆ, ಅವರಿಂದ ನಿಷ್ಪಕ್ಷವಾದ ತನಿಖೆ ನಿರೀಕ್ಷಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸರ್ಕಾರಿ ಜಮೀನನ್ನು ಲಪಟಾಯಿಸಿ ಬೇರೆ ಸೈಟುಗಳನ್ನು ವಾಪಸ್ಸು ಕೊಟ್ಟಿದ್ದಾರೆ. ಸೈಟುಗಳನ್ನು ವಾಪಸ್ಸು ಮಾಡುವ ಮೂಲಕ ಅವುಗಳನ್ನು ಅಕ್ರಮವಾಗಿ ಪಡೆದಿದ್ದು ಅನ್ನೋ ಸಂಗತಿ ಸಾಬೀತಾಗಿದೆ. ಸಿದ್ದರಾಮಯ್ಯ ಪರ ವಾದಿಸಲು ದೆಹಲಿಯಿಂದ ಖ್ಯಾತ ವಕೀಲರು ಬಂದರೂ ಮುಖ್ಯಮಂತ್ರಿಯ ಅಕ್ರಮ ಮುಚ್ಚಿಡಲಾಗಲಿಲ್ಲ ಎಂದು ತಿಳಿಸಿದರು.