ನವದೆಹಲಿ,ಅ.17(DaijiworldNews/TA):ಬಹ್ರೈಚ್ ಹಿಂಸಾಚಾರ ಪ್ರಕರಣದ ಇಬ್ಬರು ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಗುರುವಾರ ಗುಂಡು ಹಾರಿಸಿದ್ದಾರೆ. ನೇಪಾಳ ಗಡಿಯ ಬಳಿ ಈ ಘಟನೆ ನಡೆದಿದೆ.
ಬಹ್ರೈಚ್ನಲ್ಲಿ ರಾಮ್ ಗೋಪಾಲ್ ಮಿಶ್ರಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ ಸರ್ಫರಾಜ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ಅಧಿಕಾರಿಗಳು ಮಾಡಿದ ಎನ್ಕೌಂಟರ್ನಲ್ಲಿ ಪ್ರಮುಖ ಆರೋಪಿಗಳಾದ ರಿಂಕು, ಸರ್ಫರಾಜ್ ಮತ್ತು ತಾಲಿಬ್ ಗಾಯಗೊಂಡಿದ್ದಾರೆ.
ಪ್ರಾಥಮಿಕ ಆರೋಪಿ ಸರ್ಫರಾಜ್ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ನೇಪಾಳ ಗಡಿಗೆ ಸಮೀಪವಿರುವ ಹಂಡಾ ಬಸೆಹ್ರಿ ಕಾಲುವೆ ಬಳಿ ಈ ಘಟನೆ ನಡೆದಿದೆ. ಇಬ್ಬರೂ ಆರೋಪಿಗಳಿಗೆ ಬುಲೆಟ್ ಗಾಯಗಳ ನಂತರ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರ ನನ್ಪಾರಾಕ್ಕೆ ಕರೆದೊಯ್ಯಲಾಯಿತು.