ಬೆಂಗಳೂರು,ಅ.13(DaijiworldNews/AK): ಕರ್ನಾಟಕದಲ್ಲಿ ಈಗ ಬಿಗ್ ಬಾಸ್ ಸೀರಿಯಲ್ ನಡೆಯುತ್ತಿದೆ. ಕಾಂಗ್ರೆಸ್ ಸರಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಯಂತೆ ಸರಕಾರ ನಡೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್ ( ವಾಪಸ್ಗೆ ನಿರ್ಧಾರ ಖಂಡಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು, ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ ಮುಸಲ್ಮಾನರ ಬಿಗ್ಬಾಸ್. ಭಾರತಕ್ಕೆ ಅಪಮಾನ ಮಾಡುವ ಕೆಲಸ ಮಾಡ್ತಿರೋರೇ ಹೆಚ್ಚು ಇವರಿಗೆ. ಇವರು ಸಿಎಂ ಸ್ಥಾನದಲ್ಲಿ ಕೂತು ಕಾನೂನು ಕಾಪಾಡುವ ಕೆಲಸ ಮಾಡ್ತಿಲ್ಲ. ಮುಡಾ ಸೈಟು ವಾಪಸ್, ಖರ್ಗೆ ಸಿಎ ಸೈಟು ವಾಪಸ್, ಈಗ ಕೇಸ್ ವಾಪಸ್. ಮುಸಲ್ಮಾನರ ಓಲೈಕೆಯಿಂದ ಅಧಿಕಾರದಲ್ಲಿ ಉಳ್ಕೋತಾರೆ ಅನ್ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಈ ವೇಳೆವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳು ಮನುವಾದ ಪಾಲಿಸುವವರು. ಹಿಂದೂಗಳು ತಾವು ಹಿಂದೂ ಎಂದ ತಕ್ಷಣ ನಿಮಗ್ಯಾಕೆ ಬೆಂಕಿ ಬೀಳುತ್ತದೆ? ಇದಕ್ಕೆ ಉತ್ತರ ಕೊಡಲು ನಿಮಗೆ ಸಾಧ್ಯವೇ?ಅಮಾಯಕ ಪೊಲೀಸರ ಮೇಲೆ ಕಲ್ಲು ತೂರಿ ಗಾಯ ಮಾಡಿ ಆಸ್ಪತ್ರೆಗೆ ಕಳಿಸಿದವರ ಕೇಸು ಹಿಂದಕ್ಕೆ ಪಡೆಯುತ್ತಿದ್ದೀರಿ. ಅವರು ದೇಶಪ್ರೇಮಿಗಳೇ? ಎಂದರು.
ಹುಬ್ಬಳ್ಳಿಯಲ್ಲಿ ದೇಶದ್ರೋಹಿಗಳ ಕೇಸನ್ನು ವಾಪಸ್ ಪಡೆದ ಸಿದ್ದರಾಮಯ್ಯನವರು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರ ಸಚಿವಸಂಪುಟದ ಎಲ್ಲ ಸಹೋದ್ಯೋಗಿಗಳೂ ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಇದು ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಹುಬ್ಬಳ್ಳಿ ಗಲಭೆ, ಕಾನೂನು ಕೈಗೆ ತೆಗೆದುಕೊಂಡ ಘಟನೆ ಹಿನ್ನೆಲೆಯಲ್ಲಿ ದಾಖಲಾಗಿದ್ದ ಕೇಸನ್ನು ಹಿಂಪಡೆದುದು ಖಂಡನಾರ್ಹ. ಕಾನೂನನ್ನು ಗೌರವಿಸದ ಕಾಂಗ್ರೆಸ್ ಸರಕಾರ ಎಡವಟ್ಟಿನ ಸರಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಟೀಕಿಸಿದರು.