ನವದೆಹಲಿ, ಅ.05(DaijiworldNews/TA): ಬಡ ಕುಟುಂಬದ ಮಕ್ಕಳು ಅಧಿಕಾರಿಗಳಾದರೆ ಅದು ಮತ್ತಷ್ಟು ಸ್ಪೂರ್ತಿದಾಯಕ ಕಥಾನಕವಾಗಿರುತ್ತದೆ. ಐಎಎಸ್ ಅಧಿಕಾರಿ ಶ್ವೇತಾ ಅಗರ್ವಾಲ್ ಅವರ ಯಶಸ್ಸಿನ ಕಥೆಯು ಅದೇ ತೆರನಾದ ಒಂದು ಪ್ರೇರಕ ಕಥೆಯಾಗಿದೆ.
ದಿನಸಿ ಮಾರಾಟಗಾರನ ಮಗಳು ತನ್ನ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗುತ್ತಾರೆ.ಅದರ ಸಂಪೂರ್ಣ ವಿವರ ಇಂತಿವೆ.
ಶ್ವೇತಾ ಅಗರ್ವಾಲ್ ಅವರು 2015 ರಲ್ಲಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 19 ನೇ ರ್ಯಾಂಕ್ ಗಳಿಸುತ್ತಾರೆ. ಆದರೆ ಅವರ ಸಾಧನೆಯ ಹಾದಿ ಅಷ್ಟು ಸುಲಭವಾಗಿರಲಿಲ್ಲ.
ಇದು ಭದ್ರೇಶ್ವರದ ಒಬ್ಬ ಬಡ ಕಿರಾಣಿ ಅಂಗಡಿಯವನ ಮಗಳ ಸಾಧನೆಯ ಕಥೆ. ಶ್ವೇತಾ ಅಗರ್ವಾಲ್ ಸೆಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್ನಲ್ಲಿ, ಬಳಿಕ ಸೆಂಟ್ ಜೋವಿಯರ್ಸ್ ಕಾಲೇಜು ಕೋಲ್ಕತಾದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಓದುವ ಕಾಲಕ್ಕೆ ಕಾನ್ವೆಂಟ್ ಫೀಸು ತಿಂಗಳಿಗೆ 165ರೂ ಇತ್ತು. ಅವರದು ಅವಿಭಕ್ತ ಕುಟುಂಬವಾಗಿತ್ತು. ಹೀಗಾಗಿ ಅವರ ತಂದೆ ವ್ಯವಹಾರಿಕ ರೂಪದಲ್ಲಿ ನಿರುದ್ಯೋಗಿಯಾಗಿದ್ದರು. ಆದರೂ ತನ್ನ ಮಗಳ ವಿದ್ಯಾಭ್ಯಾಸಕ್ಕೆ ಸದಾ ಬೆಂಬಲವಾಗಿದ್ದ ತಂದೆ ಆಕೆಯ ಕನಸನ್ನು ಸಾಕಾರಗೊಳಿಸಲು ಕೂಲಿ ಸಹ ಮಾಡಿದ್ದರು.
ಅವಿಭಕ್ತ ಕುಟುಂಬದಲ್ಲಿ ಅವರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಪಸ್ವರ ಎದ್ದಿತ್ತು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ವ್ಯರ್ಥ ಎಂಬ ಮಾತುಗಳು ಕೇಳಿ ಬಂದವು. ಆದರೆ ಕೊನೆ ಸಮಯದಲ್ಲಿ ಪೋಷಕರ ಸಹಕಾರದೊಂದಿಗೆ ಐಎಎಸ್ ತರಬೇತಿ ಪಡೆದು ಕನಸು ನನಸಾಗಿಸಿದರು.
ಶ್ವೇತಾ ಅಗರ್ವಾಲ್ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದು ತೇರ್ಗಡೆಯಾದರು. ಅಂತಿಮವಾಗಿ, ಐಎಎಸ್ ಆಗುವ ಅವಳ ಕನಸು ನನಸಾಯಿತು ಮತ್ತು ಆಕೆಗೆ ಬಂಗಾಳದ ಕೇಡರ್ ಆಗಿ ಆಯ್ಕೆಯಾದರು. ತನ್ನ ಮೊದಲ ಪ್ರಯತ್ನದಲ್ಲೇ ಅವರು 497 ನೇ ಶ್ರೇಣಿ ಪಡೆದು ತೇರ್ಗಡೆ ಹೊಂದಿ ಐಆರ್ಎಸ್ ಹುದ್ದೆಗೆ ಬಂದರು.
ಮತ್ತೊಮ್ಮೆ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 141 ನೇ ರ್ಯಾಂಕ್ ಗಳಿಸಿದ್ದರು. ಆದರೂ ಅವರ ಐಎಎಸ್ ಆಗುವ ಕನಸು ನನಸಾಗಲೇ ಇಲ್ಲ. ಅಂತಿಮವಾಗಿ, 2016 ರಲ್ಲಿ, ಅವರ ಕನಸು ನನಸಾಯಿತು ಮತ್ತು ಅವರು ಅಖಿಲ ಭಾರತ 19 ನೇ ಶ್ರೇಣಿಯೊಂದಿಗೆ ಐಎಎಸ್ ಅಧಿಕಾರಿಯಾದರು.