ಶ್ರೀನಗರ, ಸೆ.29(DaijiworldNews/AA): ಕಥುವಾದ ಮಂಡ್ಲಿಯಲ್ಲಿ ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ. 2ನೇ ದಿನದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಉಗ್ರರನೊಬ್ಬನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸುತ್ತಿದೆ.
ನಿನ್ನೆ ಕಥುವಾದ ಮಂಡ್ಲಿಯಲ್ಲಿ ಭಯೋತ್ಪಾದಕರು ಇರುವಿಕೆಯ ಮಾಹಿತಿ ದೊರೆತ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧಕಾರ್ಯ ಆರಂಭಿಸಿತ್ತು. ಕಥುವಾದಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಇಂದು ಭದ್ರತಾ ಪಡೆಯು ಓರ್ವ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಂದು ಮಧ್ಯಾಹ್ನ ಬಿಲ್ಲವರ ತಹಸಿಲ್ನ ಕಾಗ್-ಮಂಡ್ಲಿಯಲ್ಲಿ ನಡೆದ ಎನ್ಕೌಂಟರ್ನ ಸ್ಥಳದಿಂದ ಭಯೋತ್ಪಾದಕನ ಮೃದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನುಳಿದ ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮೂರ್ನಾಲ್ಕು ವಿದೇಶಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಎನ್ಕಂಟರ್ ಹಾಗೂ ಶೋಧಕಾರ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ಜೊತೆಗೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ತಿಳಿಸಿದ್ದಾರೆ.