ನವದೆಹಲಿ, ಸೆ.27(DaijiworldNews/AA): ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಮೂಲಕ 'ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆ 13 ಶಾಸಕರನ್ನು ಕಾಂಗ್ರೆಸ್ನ ಹರಿಯಾಣ ಘಟಕವು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.
ಅಕ್ಟೋಬರ್ 5ರಂದು ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ಪಕ್ಷದೊಳಗಿನ ಅಶಿಸ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ಕಾಂಗ್ರೆಸ್ನ ಹರಿಯಾಣ ಘಟಕದ ಈ ನಿರ್ಧಾರವು ಕೂಡಲೇ ಜಾರಿಗೆ ಬರಲಿದೆ.
ಗುಹ್ಲಾ ಎಸ್ಸಿಯಿಂದ ನರೇಶ್ ಧಂಡೆ, ಜಿಂದ್ನಿಂದ ಪರ್ದೀಪ್ ಗಿಲ್, ಪುಂಡ್ರಿಯಿಂದ ಸಜ್ಜನ್ ಸಿಂಗ್ ಧುಲ್ ಮತ್ತು ಪಾಣಿಪತ್ ಗ್ರಾಮಾಂತರದಿಂದ ವಿಜಯ್ ಜೈನ್ ಮುಂತಾದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಆದೇಶವನ್ನು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಅವರು ಹೊರಡಿಸಿದ್ದಾರೆ.