ಕಾರವಾರ, ಸೆ.25(DaijiworldNews/AA): ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಮೃತದೇಹ ಹಾಗೂ ಲಾರಿ ಇಂದು ಪತ್ತೆಯಾಗಿದೆ.
ಭೂಕುಸಿತ ಸಂಭವಿಸಿದ ದಿನ ಮೃತ ಅರ್ಜುನ್ ಅವರು ಟ್ರಕ್ನಲ್ಲಿ ಮರ ತುಂಬಿಸಿಕೊಂಡು ಕೋಝಿಕ್ಕೋಡ್ ಕಡೆಗೆ ತೆರಳುತ್ತಿದ್ದರು. ಈ ಅವಘಡದಲ್ಲಿ ನಾಪತ್ತೆಯಾಗಿದ್ದ ಅರ್ಜುನ್ ಮೃತದೇಹ ಇದೀಗ ಪತ್ತೆಯಾಗಿದೆ.
ಕಳೆದ ಆರು ದಿನಗಳಿಂದ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಅರ್ಜುನ್ ಅವರ ಶವ ಹಾಗೂ ಅವರು ಚಲಾಯಿಸುತ್ತಿದ್ದ ಕೇರಳ ಮೂಲದ ಲಾರಿ ಪತ್ತೆಯಾಗಿದೆ. ಪತ್ತೆಯಾಗಿರುವ ಈ ಲಾರಿಯು ಸಂಪೂರ್ಣ ನಜ್ಜುಗುಜ್ಜಾಗಿದೆ.