ಮೈಸೂರು, ಸೆ.23(DaijiworldNews/AA): 3 ದಿನದ ಹಿಂದೆ ಮೈಸೂರು ದಸರಾ ಆನೆಗಳಾದ ಧನಂಜಯ ಹಾಗೂ ಕಂಜನ್ ಆನೆಯ ಕಾದಾಟದ ಬೆನ್ನಲ್ಲೇ ಆನೆಗಳ ಬಳಿ ಫೋಟೋ ಶೂಟ್, ರೀಲ್ಸ್ ಮಾಡದಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆನೆಗಳ ಕದಾಟದ ನಂತರ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಆನೆಗಳ ಬಳಿ ದಂತ ಹಿಡಿದುಕೊಂಡು ಫೋಟೋ ಶೂಟ್ ಮಾಡಿಸುವುದು, ವಿಡಿಯೋ ಮಾಡಿಕೊಂಡು ರೀಲ್ಸ್ಗೆ ಮುಂದಾಗುವಂತ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಬಳಿ ಫೋಟೋ ಶೂಟ್ ಹಾಗೂ ರೀಲ್ಸ್ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳೇ ಅವಕಾಶ ನೀಡಿದ್ದಾರೆ. ಇದರಿಂದ ಆನೆಗಳು ವಿಚರಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ. 3 ದಿನಗಳ ಹಿಂದೆ ನಡೆದಿರುವ ಆನೆಗಳ ನಡುವಿನ ಕಾದಾಟಕ್ಕೆ ಇದು ಕೂಡ ಒಂದು ಕಾರಣವಾಗಿದೆ ಎಂದು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅಧಿಕಾರಿಗಳೇ ರೀಲ್ಸ್ಗೆ ಅವಕಾಶ ನೀಡ್ತಿದ್ದಾರೆ ಎಂಬ ಆರೋಪ ಇದೆ. ಇದರಿಂದ ಆನೆಗಳು ವಿಚಲಿತಗೊಂಡು ಅನುಚಿತವಾಗಿ ವರ್ತಿಸುತ್ತಿವೆ. ಕಾಂಜನ್ ಮತ್ತು ಧನಂಜಯ ಆನೆಗಳ ನಡುವೆ ಕಾದಾಟ ಬಗ್ಗೆ ವರದಿಯಿಂದ ತಿಳಿದುಬಂದಿದೆ. ಕಾಂಜನ್, ಧನಂಜಯ ಆನೆಗಳು ಕಾದಾಟ ಆಗಲು ಇದೂ ಕಾರಣ. ಆನೆಯ ದಂತ, ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿಕೊಳ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿಬಿರದಿಂದ ತಂದಿರುವ ಅನೆಗಳನ್ನು ಸುರಕ್ಷಿತವಾಗಿ ಶಿಬಿರಕ್ಕೆ ಬಿಡಬೇಕು. ಅಲ್ಲಿಯ ತನಕ ಯಾವುದೇ ಅನಾಹುತ ಆಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.