ಶ್ರೀನಗರ, ಸೆ.23(DaijiworldNews/AK): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇವಲ ಮನ್ ಕಿ ಬಾತ್ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು, ಕೆಲಸದ ವಿಚಾರ ಬಗ್ಗೆ ಗಮನವೇ ಇಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶ್ರೀನಗರದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಮೋದಿ ಕೇವಲ ಅವರ ಮನ್ ಕಿ ಬಾತ್ ಬಗ್ಗೆ ಮಾತನಾಡುತ್ತಾರೆ. ಉದ್ಯೋ ಗ ಅವಕಾಶಗಳು, ಬೆಲೆ ಏರಿಕೆ ನಿಯಂತ್ರಣದ ಸೇರಿದಂತೆ ಕೆಲಸ ವಿಚಾರವನ್ನು ಅವರು ಮಾತನಾಡುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚಿನ ದಿನಗಳಲ್ಲಿ, ಪ್ರಧಾನಿ ಮೋದಿಯವರ ಮುಖವು ಬದಲಾಗಿದೆ, ಅವರ ಮನಸ್ಥಿತಿ ಬದಲಾಗಿದೆ. ಇದಕ್ಕೆ ಐ ಎನ್ಡಿಐಎ ಮೈತ್ರಿ, ಕಾಂಗ್ರೆಸ್ ಪಕ್ಷ ಮತ್ತು ಈ ದೇಶದ ಜನರು ಕಾರಣ ಎಂದು ರಾಹುಲ್ ಗಾಂಧಿ ಹೇಳಿದರು.