ಪಂಜಾಬ್, ಸೆ.16(DaijiworldNews/AK): ವೈದ್ಯ ವೃತ್ತಿಯನ್ನು ತೊರೆದು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾದ ನವಜೋತ್ ಸಿಮಿ ಅವರ ಯಶೋಗಾಥೆ .
ಪಂಜಾಬ್ನ ಗುರುದಾಸ್ಪುರದಲ್ಲಿ ಜನಿಸಿದ ನವಜೋತ್ ಅವರು ಲುಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಅನ್ನು ಪೂರ್ಣಗೊಳಿಸಿದರು.
ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುವ ಮುನ್ನ ನವಜೋತ್ ಅವರು ಆರಂಭದಲ್ಲಿ ದಂತವೈದ್ಯರಾಗಿ ಕೆಲಸ ಮಾಡಿದ್ದರು.ಯುಪಿಎಸ್ಸಿ ಪರೀಕ್ಷೆ ಬರೆಯಲು ಅವರು ದೆಹಲಿಯ ಪ್ರತಿಷ್ಠಿತ ಸಂಸ್ಥೆಯಿಂದ ತರಬೇತಿ ಪಡೆಯುತ್ತಾರೆ. ನಂತರ ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರು 735 ನೇ ರ್ಯಾಂಕ್ ಗಳಿಸುತ್ತಾರೆ. ಬಳಿಕ ಆಕೆಯನ್ನು ಐಪಿಎಸ್ ಬಿಹಾರ ಕೇಡರ್ಗೆ ನಿಯೋಜಿಸಲಾಯಿತು.
ಪ್ರಸ್ತುತ ಪಾಟ್ನಾದಲ್ಲಿ ಪೊಲಿಸ್ ಉಪ ಅಧೀಕ್ಷಕರಾಗಿ (ಡಿಎಸ್ಪಿ) ಸೇವೆ ಸಲ್ಲಿಸುತ್ತಿದ್ದಾರೆ.ನವಜೋತ್ ಅವರು ಪಂಜಾಬ್ನ ಐಎಎಸ್ ಅಧಿಕಾರಿ ತುಷಾರ್ ಸಿಂಗ್ಲಾ ಅವರನ್ನು ವಿವಾಹವಾಗಿದ್ದಾರೆ. ಅವರು 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 86 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿರುತ್ತಾರೆ. ಅವರು ಪ್ರಸ್ತುತ ಬಿಹಾರದ ಬಂಕಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.