ಬೆಂಗಳೂರು, ಸೆ.15 (DaijiworldNews/AK):ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಬಿಜೆಪಿಯಿಂದ ಅವರಿಗೆ ನೋ ಟಿಸ್ ಜಾರಿಯಾಗಿದೆ.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀ ಲ ಅವರು ಮುನಿರತ್ನ ಮೇ ಲೆ ಕೇಳಿ ಬಂದಿರುವ ಆರೋ ಪದ ಬಗ್ಗೆ ಸ್ಪಷ್ಟಿಕರಣ ನೀ ಡುವಂತೆ ನೋಟಿಸ್ ನೀಡಿದ್ದಾರೆ.
ಮುನಿರತ್ನ ಅವರದ್ದು ಎನ್ನಲಾದ ಆಡಿಯೋದಲ್ಲಿ ಅವಹೇ ಳನಕಾರಿಯಾಗಿ ಮಾತನಾಡಲಾಗಿದೆ ಎಂಬುದು ಹಲವೆಡೆ ಪ್ರಸಾರವಾಗುತ್ತಿದೆ. ಇದು ಪಕ್ಷದ ಶಿಸ್ತಿಗೆ ದಕ್ಕೆಯನ್ನುಂಟು ಮಾಡಿದೆ. ನೋಟಿಸ್ ತಲುಪಿದ 5 ದಿನಗಳ ಒಳಗಾಗಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಸ್ಪಷ್ಟಿಕರಣ ನೀಡಬೇ ಕು ಎಂದು ತಿಳಿಸಲಾಗಿದೆ.