ಬಿಹಾರ, ಸೆ.12(DaijiworldNews/AK):ಕಾಮ್ಯಾ 22 ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 172 ರ ಅಖಿಲ ಭಾರತ ಶ್ರೇಣಿಯನ್ನು (AIR) ಪಡೆದುಕೊಂಡರು, ಅದು ಕೂಡ ಯಾವುದೇ ತರಬೇತಿಯಿಲ್ಲದೆ. ಅವರ ಯಶಸ್ಸಿನ ಗುಟ್ಟು ಇಲ್ಲಿದೆ.
ಕಾಮ್ಯಾ ಮೂಲತಃ ಒಡಿಶಾ ರಾಜ್ಯದವರು. ಚಿಕ್ಕಂದಿನಿಂದಲೂ ಕಾಮ್ಯಾ ಅಧ್ಯಯನದಲ್ಲಿ ಚುರುಕಾಗಿದ್ದರು. ಹೀಗಾಗಿ 12 ನೇ ತರಗತಿಯಲ್ಲಿ ಟಾಪರ್ ಆದರು. 12ನೇ ತರಗತಿಯ ನಂತರ ಕಾಮ್ಯಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಪ್ರತಿಷ್ಠಿತ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಕಾಮ್ಯಾ ತೇರ್ಗಡೆಯಾದರು. 2019 ರಲ್ಲಿ, ಅವರು ದೇಶದಲ್ಲಿ UPSC ಪರೀಕ್ಷೆಯಲ್ಲಿ 172 ನೇ ರ್ಯಾಂಕ್ ಗಳಿಸಿದ್ದರು ಮತ್ತು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾದರು.
ಆರಂಭದಲ್ಲಿ ಅವರಿಗೆ ಹಿಮಾಚಲ ಕೇಡರ್ ನೀಡಲಾಗಿತ್ತು. ನಂತರ ಅವರನ್ನು ಬಿಹಾರ ಕೇಡರ್ಗೆ ವರ್ಗಾಯಿಸಲಾಯಿತು. ಕಾಮ್ಯಾ ಅವರ ಪತಿ ಕೂಡ ಐಪಿಎಸ್ ಅಧಿಕಾರಿ. ಅವರು 2021 ರಲ್ಲಿ ಬಿಹಾರ ಕೇಡರ್ ಐಪಿಎಸ್ ಅವಧೇಶ್ ಸರೋಜ್ ಅವರನ್ನು ವಿವಾಹವಾದರು.