ನವದೆಹಲಿ,ಸೆ.11 (DaijiworldNews/AK): ರಾಹುಲ್ ಗಾಂಧಿ ಭಾರತದ ಬಗ್ಗೆ ತಪ್ಪುದಾರಿಗೆ ಎಳೆಯುವಂತಹ, ಆಧಾರವಿಲ್ಲದ ಹಾಗೂ ಸತ್ಯವಲ್ಲದ ಮಾತುಗಳನ್ನು ಆಡುತ್ತಿರುವುದು , ಆ ಮೂಲಕ ಅವರು ಭಾರತದ ಘನತೆಯನ್ನು ಹಾಳು ಮಾಡುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಚೀನಾಗಡಿ ವಿವಾದದ ಕುರಿತಾಗಿ ರಾಹುಲ್ ಅವರು ನೀಡಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು ಇಂತಹ ತಪ್ಪು ಹೇಳಿಕೆಗಳನ್ನು ನೀಡಬಾರದು ಎಂದು ಅವರು ರಾಹುಲ್ ಅವರನ್ನು ಎಕ್ಸ್ ಬರಹದ ಮೂಲಕ ಸಿಂಗ್ ಆಗ್ರಹಿಸಿದ್ದಾರೆ.
ಸಿಖ್ ಸಮುದಾಯದವರಿಗೆ ಭಾರತದ ಗುರುದ್ವಾರಗಳಲ್ಲಿ ಟರ್ಬ ನ್ ಧರಿಸಲು ಅವಕಾಶ ಕೊಡುತ್ತಿಲ್ಲ, ಸಿಖ್ಖರು ಅವರ ಧರ್ಮ ಕ್ಕೆ ಅನುಗುಣವಾಗಿ ವರ್ತಿಸುವುದನ್ನು ತಡೆಯಲಾಗುತ್ತಿದೆ ಎಂದು ರಾಹುಲ್ ಹೇ ಳಿದ್ದಾರೆ. ಇವು ಸಂಪೂರ್ಣವಾಗಿ ಆಧಾರವಿಲ್ಲದ ಮಾತುಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೀಸಲಾತಿ ಕುರಿತು ಭಾರತದಲ್ಲಿ ಸಮಾನತೆಯ ಸ್ಥಿತಿಮೂಡಿದಾಗ ಮೀ ಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.