ಹುಬ್ಬಳ್ಳಿ, ಸೆ.8(DaijiworldNews/AK): ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನತೆಗೆ ಪೂರೈಸುವಷ್ಟು ಅಕ್ಕಿ ಪೂರೈಸಲು ಸಾಧ್ಯವಾಗದೇ ಸರ್ಕಾರ ಪೇಚಿಗೆ ಸಿಲುಕಿತ್ತು. ಹಾಗಾಗಿ ಅಕ್ಕಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಅಕ್ಕಿಯನ್ನು ನೀಡಿರಲಿಲ್ಲ. ಹಾಗಾಗಿ 5ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದನ್ನು ಮುಂದುವರೆಸುವುದಾಗಿ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇದರ ಬೆನ್ನಲ್ಲೇ ಪ್ರಲ್ಹಾದ್ ಜೋಶಿ ಖರೀದಿಸುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಅಂದ್ರೂ ಖರೀದಿಸುತ್ತಿಲ್ಲ. ಕರ್ನಾಟಕ ಸರ್ಕಾರ ಅಕ್ಕಿ ಖರೀದಿಸಲು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಚಿವ ಮುನಿಯಪ್ಪ ಬಂದು ಅಕ್ಕಿ ಕೊಡುತ್ತೀರಾ ಅಂದ್ರು, ಕೊಡುತ್ತೇವೆ ಅಂದೆವು. ಆದರೆ ಸಿಎಂ ಅನುಮತಿ ಕೊಟ್ಟಿಲ್ಲ, ಏಕೆ ಕೊಟ್ಟಿಲ್ಲ ಎಂದು ಮುನಿಯಪ್ಪ ಹೇಳಬೇಕು. ಎಂದು ಹೇಳಿದರು.