ಬಿಹಾರ, ಸೆ.8(DaijiworldNews/AK): ಚಲಿಸುತ್ತಿರುವಾಗಲೇ ರೈಲಿನ ಬೋಗಿಗಳು ಬೇರ್ಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ದೆಹಲಿಯಿಂದ ಇಸ್ಲಾಂಪುರಕ್ಕೆ ಹೋಗುವ ಮಗಧ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಚಲಿಸುವಾಗ ಎರಡು ಭಾಗಗಳಾಗಿ ಬೇರ್ಪಟ್ಟಿತ್ತು. ಇದರಿಂದ ಸದ್ಯ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ.
ಮಗಧ್ ಎಕ್ಸ್ಪ್ರೆಸ್ ರೈಲು ಬಕ್ಸಾರ್ನ ತುದಿಗಂಜ್ ನಿಲ್ದಾಣದಿಂದ ಸ್ವಲ್ಪ ಮುಂದೆ ಚಲಿಸುವಾಗ ಬೋಗಿಗಳು ಎರಡು ಭಾಗಗಳಾಗಿ ಬೇರ್ಪಟ್ಟಿತು, ಇದರಿಂದಾಗಿ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರು ಭಯಭೀತರಾದರು. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸದ್ಯ ರೈಲ್ವೆ ಸಚಿವಾಲಯವು ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದೆ ತನಿಖಾ ವರದಿಯನ್ನು ಕೇಳಿದೆ. ಎಸಿ ಇರುವ ಎಸ್-7 ಕೋಚ್ ಮುಂದೆ ಹೋಯಿತು. ಆದರೆ ಉಳಿದ ಕೋಚ್ಗಳು ಟ್ರ್ಯಾಕ್ನಲ್ಲಿ ನಿಂತಿತ್ತು. ಅಷ್ಟರಲ್ಲಿ ಲೋಕೋಪೈಲಟ್ ಕಣ್ಣಿಗೆ ಬಿದ್ದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಅಲ್ಲದೇ ಮುಖ್ಯ ಮಾರ್ಗದಲ್ಲಿ ಕಾರ್ಯಾಚರಣೆಗಳು ಸ್ಥಗಿತಗೊಸಲಾಯಿತು.