ಹರಿಯಾಣ, ಸೆ.8(DaijiworldNews/AA): ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಅದನ್ನೆಲ್ಲಾ ಎದುರಿಸಿ, ನಮ್ಮ ಗುರಿಯನ್ನು ಸಾಧಿಸುವ ಛಲವನ್ನು ಹೊಂದಿರಬೇಕು. ಹೀಗೆ ತನ್ನ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಅಂಕಿತಾ ಚೌಧರಿ ಅವರ ಸ್ಫೂರ್ತಿದಾಯಕ ಕತೆ ಇದು.
ಅಂಕಿತಾ ಚೌಧರಿ ಅವರು ಹರಿಯಾಣದ ರೋಹ್ಟಕ್ ಜಿಲ್ಲೆಯವರು. ಅಂಕಿತಾ ಅವರು ಕೆಳಮಧ್ಯಮ ವರ್ಗದಲ್ಲಿ ಬೆಳೆದವರು. ಆಕೆಯ ತಂದೆ ಸಕ್ಕರೆ ಕಾರ್ಖಾನೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ನಂತರ ಅಂಕಿತಾ ಯುಪಿಎಸ್ಸಿ ಪರೀಕ್ಷೆಗೆ ಪ್ರಯತ್ನಿಸಿದರು. ಅವರು ಸ್ನಾತಕೋತ್ತರ ಪದವಿಯ ಜೊತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮತ್ತು ಐಐಟಿ ದೆಹಲಿಯಿಂದ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ನಂತರ, ಅವರು ಯುಪಿಎಸ್ಸಿ ಪರೀಕ್ಷೆ ಮತ್ತಷ್ಟು ತಯಾರಿ ಹೆಚ್ಚಾಗಿ ಮಾಡುತ್ತಾರೆ.
ಅಂಕಿತಾ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ವೇಳೆ ಆಕೆಯ ತಾಯಿ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಇದರಿಂದ ಅವರು ಸಾಕಷ್ಟು ಕುಗ್ಗಿಹೋಗುತ್ತಾರೆ. ಆದರೆ ತನ್ನ ತಾಯಿಗೆ ಗೌರವಾರ್ಥವಾಗಿ ಐಎಎಸ್ ಅಧಿಕಾರಿಯಾಗಲು ಅವರು ಬಯಸುತ್ತಾರೆ. ಜೊತೆಗೆ ಅಂಕಿತಾ ಅವರ ತಂದೆ ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ.
ಅಂಕಿತಾ ಅವರು 2017 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ವಿಫಲರಾಗುತ್ತಾರೆ. ಬಳಿಕ ಅಂಕಿತಾ 2018 ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 14ನೇ ರ್ಯಾಂಕ್ ಪರೆದು ಐಎಎಸ್ ಅಧಿಕಾರಿಯಾಗುತ್ತಾರೆ. ಈ ಮೂಲಕ ಅಮಕಿತಾ ಚೌಧರಿ ಅವರು ಎಲ್ಲಾ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.