ಹುಬ್ಬಳ್ಳಿ, ಸೆ.1(DaijiworldNews/AA): ಸಿಎಂ ಟಗರು. ಟಗರು ಯಾವತ್ತಿಗೂ ಟಗರೇ. ಭಯ ಬೀಳೋ ಪ್ರಶ್ನೆನೇ ಬರಲ್ಲ. ಬಿಜೆಪಿ ಅವರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹುಲಿ ಇದ್ದಂತೆ. ಸಿದ್ದರಾಮಯ್ಯ ಜೊತೆ ಹೈಕಮಾಂಡ್, ಶಾಸಕರು, ರಾಜ್ಯದ ಜನ ಇದ್ದಾರೆ. ಸಿದ್ದರಾಮಯ್ಯ ಬಂದು ನಿಂತರೆ ಸಾಕು, ಸಾವಿರಾರು ಜನ ಬಂದು ಕೂರುತ್ತಾರೆ ಎಂದು ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ್ದಾರೆ.
ಕಾಂಗ್ರೆಸ್ ಮುಡಾ ಚಲೋ ಮಾಡಲಿ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ. ಅವರ ಬಗ್ಗೆ ಜುಲೈನಲ್ಲಿ ಖಾಸಗಿ ವ್ಯಕ್ತಿ ದೂರು ನೀಡುತ್ತಾರೆ. ಅದೇ ದಿನ ಪ್ರಾಸಿಕ್ಯೂಷನ್ಗೆ ಕೊಡುತ್ತಾರೆ. ಅದಕ್ಕಿಂತ ಮುಂಚೆ 8 ತಿಂಗಳ ಹಿಂದೆಯೇ ಕುಮಾರಸ್ವಾಮಿಗೆ ಪ್ರಾಸಿಕ್ಯೂಷನ್ ಕೇಳುತ್ತಾರೆ, ಆದರೆ ನೀಡಲ್ಲ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ಜನಾರ್ದನ ರೆಡ್ಡಿಗೆ ಕೊಟ್ಟಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ನಾನು ವಕೀಲರು ವಾದ ಮಾಡೋದನ್ನು ನೋಡಿದೆ. ಅದರಲ್ಲಿ ಸಿದ್ದರಾಮಯ್ಯನವರದು ಬೇನಾಮಿ ಆಸ್ತಿ ಎನ್ನುವ ಹಾಗೆ ಮಾತನಾಡುತ್ತಾರೆ. ಲಿಂಗ ಅವರು 1930ರಲ್ಲಿ ಹರಾಜಲ್ಲಿ ಸೈಟ್ ತೆಗೆದುಕೊಂಡಿದ್ದರು. ಆವಾಗ ಸಿದ್ದರಾಮಯ್ಯ ಹುಟ್ಟೇ ಇರಲಿಲ್ಲ. ಮಲ್ಲಿಕಾರ್ಜುನ ಅವರ ಅಕ್ಕನಿಗೆ ಸೈಟ್ ಗಿಫ್ಟ್ ಕೊಡುತ್ತಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಸೈಟ್ ಕೊಟ್ಟಿದ್ದು. 125 ಸೈಟ್ನಲ್ಲಿ 14 ಸೈಟ್ ಇವರಿಗೆ ನೀಡುತ್ತಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನಿದೆ? ಮುಡಾ ಹಗರಣ ಮುಖ್ಯಮಂತ್ರಿಗಳಿಗೆ ಯಾಕೆ ಮುಳ್ಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.