ಅಹಮ್ಮದಾಬಾದ್, ಆ.27(DaijiworldNews/AK): ಅಹ್ಮದಾಬಾದ್- ಜೋಧ್ಪುರಗೆ ಹೋಗುವ ವಂದೇ ಭಾರತ್ ರೈಲು ಹಳಿಗಳ ಮೇಲಿದ್ದ ಸಿಮೆಂಟ್ ಸ್ಲ್ಯಾಬ್ಗೆ ಡಿಕ್ಕಿ ಹೊಡೆದಿರುವ ಘಟನೆ ರಾಜಸ್ತಾನದ ಪಾಲಿ ಎಂಬಲ್ಲಿ ಆಗಸ್ಟ್ 23ಕ್ಕೆ ನಡೆದಿದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಜವಾಯಿ ಹಾಗೂ ಬಿರೋಲಿಯಾ ನಡುವೆ ರೈಲು ಚಲಿಸುತ್ತಿರುವಾಗ ಎಂಜಿನ್ ಸಿಮೆಂಟ್ ಸ್ಲ್ಯಾಬ್ಗೆ ಡಿಕ್ಕಿ ಹೊಡೆದಿದೆ.ಘಟನೆಯಿಂದ ರೈಲು ಬರುವಾಗ 8 ನಿಮಿಷ ತಡವಾಗಿ ಬಂದಿದೆ. ಇದರ ಹೊರತಾಗಿ ಯಾವ ಪ್ರಯಾಣಿಕರಿಗೂ ಸಮಸ್ಯೆ ಆಗಿಲ್ಲ ಎಂದು ವಾಯುವ್ಯ ಅಧಿಕಾರಿ ಶಶಿಕಿರಣ್ ತಿಳಿಸಿದ್ದಾರೆ.
ಫಲ್ನಾ ಪ್ರದೇಶದ ಹಿರಿಯ ಎಂಜಿನಿಯರ್ (ಎಸ್ಎಸ್ಇ) ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಫುಟ್ಪಾತ್ ನಿರ್ಮಿಸಲು ಬಳಸುವ ಸಿಮೆಂಟ್ ಸ್ಲ್ಯಾಬ್ ರೈಲು ಹಳಿಯ ಮೇಲೆ ಇಟ್ಟಿರುವುದು ಕಂಡುಬಂದಿದೆ ಎಂದರು.