ಮೈಸೂರು, ಆ.25(DaijiworldNews/AA): ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ ಸಿದ್ದರಾಮಯ್ಯ ಅವರ ಪಂಚೆ ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣದ ಬಗ್ಗೆ ಮಾತನಾಡಿದ ಅವರು, ಸುರೇಶ್ ಮಿನಿಸ್ಟರ್ ಫೈಲ್ ಎಲ್ಲವನ್ನೂ ಹೆಲಿಕಾಪ್ಟರ್ನಲ್ಲಿ ಬಂದು ತಗೆದುಕೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೊಂದು ಸೆಕ್ಯುರಿಟಿ ಯಾಕೆ? ಮುಡಾಗೆ ಪ್ರತಿ ತಿಂಗಳು 5 ಕೋಟಿ ಸಂಬಳ ಖರ್ಚು ವೆಚ್ಚಕ್ಕೆ ಬೇಕು. 2 ತಿಂಗಳಿಂದ 10 ಕೋಟಿ ವೆಚ್ಚವಾಗಿದೆ. ಕೆಲಸ ಏನೂ ಮುಡಾದಿಂದ ನಡೆಯುತ್ತಿಲ್ಲ. ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದೀರಿ. ಒನ್ ಮ್ಯಾನ್ ಕಮಿಷನ್ ಕುಮಾರಕೃಪದಿಂದ ಆಪರೇಟ್ ಆಗ್ತಿದೆ. ಒನ್ ಮ್ಯಾನ್ ಕಮಿಷನ್ಗಾಗಿಯೇ ಮೇಜು, ಕುರ್ಚಿ ಅಂತಾ 1.5 ಕೋಟಿ ಖರ್ಚು ಆಗಿದೆ. ರೀಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3,337 ಎಕರೆ ಗಣಿ ಭೂಮಿಯನ್ನ ಎಕರೆಗೆ 1.15 ಲಕ್ಷ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್, ಮಿನರಲ್ಸ್, ಕಂಟೆಂಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ ಅವರಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ. ಈ ಭೂಮಿಗೆ ಯಾವುದೇ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. 2017ರಲ್ಲಿ ಲಾ ಡಿಪಾರ್ಟ್ಮೆಂಟ್ ಭೂಮಿಯ ಬೆಲೆ, ಒಳಗೆ ಇರುವ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕೆಂದು ವರದಿ ನೀಡಿತ್ತು. ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ ಎಂದರು.
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ 14 ಸೈಟ್ಗೆ 62 ಕೋಟಿ ಕೇಳುತ್ತಾರೆ. ಈ ಭೂಮಿಯನ್ನು ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.