ಹೊಸದಿಲ್ಲಿ ,ಆ.24(DaijiworldNews/ AK): ಕೇಂದ್ರ ಸರಕಾರ ಏಕೀಕೃತ ಪಿಂಚಣಿ ಯೋಜನೆ ಎಂಬ ಹೊಸ ಪಿಂಚಣಿ ಯೋಜನೆಯನ್ನು ಶನಿವಾರ ಘೋಷಣೆ ಮಾಡಿದೆ.
ಕೇಂದ್ರ ಸರಕಾರಿ ನೌಕರರು ಖಚಿತವಾದ ಪಿಂಚಣಿ ,ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ಆಗಿದೆ. ಹೊಸ ಪಿಂಚಣಿ ಯೋಜನೆ 2025 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಈ ಯೋಜನೆಯು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಪಿಂಚಣಿಯನ್ನು ಖಾತರಿಪಡಿಸಲಿದೆ.
ಈ ಯೋಜನೆಯು ಇಂದು ಕೇಂದ್ರ ಸಚಿವ ಸಂಪುಟದಿಂದ ಅನುಮೋದಿಸಲ್ಪಟ್ಟಿದೆ, ಉದ್ಯೋಗಿ ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದರೆ, ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಪಿಂಚಣಿಯನ್ನು ಖಾತರಿಪಡಿಸುತ್ತದೆ. ಕಡಿಮೆ ಸೇವೆ ಹೊಂದಿರುವವರಿಗೆ, ಪಿಂಚಣಿ ಪ್ರಮಾಣಾನುಗುಣವಾಗಿರುತ್ತದೆ.