ಹೈದರಾಬಾದ್ ,ಆ.24(DaijiworldNews/AK): ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಜಂಟಿಮಾಲೀ ಕತ್ವದ ಎನ್-ಕನ್ವೆನ್ಷನ್ ಸೆಂಟರ್ ಅನ್ನು ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ನೆಲಸಮಗೊಳಿಸಲಾಯಿತು.
ಹೈದರಾಬಾದ್ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿಯ (ಹೈದ್ರಾ) ಅಧಿಕಾರಿಗಳು ಪೊಲೀಸರ ಬಿಗಿ ಬಂದೋ ಬಸ್ತುನೊಂದಿಗೆ ಶನಿವಾರ ಬೆಳಿಗ್ಗೆ ಒತ್ತುವರಿ ತೆರವು ಕಾರ್ಯಾ ಚರಣೆ ನಡೆಸಿದ್ದಾರೆ.
ತುಮ್ಮಿಡಿಕುಂಟಾ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಎನ್-ಕನ್ವೆನ್ಷನ್ ಸೆಂಟರ್ ನಿರ್ಮಿಸಲಾಗಿದೆ ಎಂಬ ಆರೋಪ ಇದೆ. ಮಾದಾಪುರದಲ್ಲಿರುವ ಕನ್ವೆನ್ಷನ್ ಸೆಂಟರ್ ಎನ್3 ಎಂಟರ್ಪ್ರೈಸ್ ಒಡೆತನದಲ್ಲಿದೆ. ಈ ಸಂಸ್ಥೆಯು ನಾಗಾರ್ಜುನ ಮತ್ತು ನಲ್ಲಾ ಪ್ರೀತಂ ಅವರ ಜಂಟಿ ಮಾಲೀಕತ್ವದಲ್ಲಿದೆ. ಎನ್– ಕನ್ವೆನ್ಷನ್ ಸೆಂ ಟರ್ ಅನ್ನು 2010–12ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಸುಮಾರು 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.
ತುಮ್ಮಿಡಿಕುಂಟಾ ಕೆರೆಗೆ ಸೇರಿದ 1.12 ಎಕರೆ ಭೂಮಿ ಮತ್ತು ಬಫರ್ ವಲಯದ ಎರಡು ಎಕರೆ ಜಾಗವನ್ನು ಒತ್ತುವರಿಮಾಡಲಾಗಿದೆ ಎಂ ದು
ಆರೋಪಿಸಲಾಗಿದೆ.
ನಾಗಾರ್ಜು ನ ಅವರು ಒತ್ತುವರಿ ತೆರವು ಪ್ರಕ್ರಿಯೆಗೆ ಶನಿವಾರ ಮಧ್ಯಾಹ್ನದ ವೇ ಳೆಗೆ ಹೈಕೋ ರ್ಟ್ ನಿಂದ ತಡೆಯಾಜ್ಞೆ ತಂದರಾದರೂ, ಆ ವೇಳೆಗಾಗಲೇ ಇಡೀ ಕನ್ವೆನ್ಷನ್ ಸೆಂಟರ್ ಅನ್ನು ಕೆಡವಲಾಗಿತ್ತು.
‘