ಬೆಂಗಳೂರು, ಆ.24(DaijiworldNews/TA):ರಾಜ್ಯ ಸರ್ಕಾರವು ಅನುಮೋದನೆಗೆ ಕಳಿಸಿದ ಬಿಲ್ ಗಳನ್ನು ರಾಜ್ಯಪಾಲರು ವಾಪಸ್ಸು ಕಳಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
6 ಬಿಲ್ ಗಳನ್ನು ಅವರು ವಾಪಸ್ಸು ಕಳಿಸಿದ್ದಾರೆ, ಕ್ಲಾರಿಫಿಕೇಶನ್ ಕೇಳಿರುತ್ತಾರೆ, ಸರ್ಕಾರ ಪರಾಮರ್ಶೆ ನಡೆಸಿ ಏನು ಮಾಡಬಹುದು ಅಂತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅವು ವಿಧಾನಸಭೆಯ ಎರಡೂ ಮನೆಗಳಲ್ಲಿ ಪಾಸಾಗಿರುವ ಬಿಲ್ ಗಳು, ಅವರು ಕೇಳಿರುವ ಸ್ಪಷ್ಟೀಕರಣಗಳು ಏನು ಅನ್ನೋದನ್ನು ನೋಡಬೇಕಾಗುತ್ತದೆ. ಅವರು ಕೇಳಿರುವ ಸ್ಪಷ್ಟೀಕರಣವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.