ಮುಂಬೈ, ಆ.23(DaijiworldNews/TA):ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತನಗೆ ನೀಡಿರುವ ಝಡ್ ಪ್ಲಸ್ ಭದ್ರತೆಯು ತನ್ನ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಒಂದು ವ್ಯವಸ್ಥೆಯಾಗಿರಬಹುದು ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಶರದ್ ಪವಾರ್ಗೆ ಕೇಂದ್ರವು ಬುಧವಾರ Z-ಪ್ಲಸ್ - ಸಶಸ್ತ್ರ ವಿಐಪಿ ಭದ್ರತೆಯ ಅತ್ಯುನ್ನತ ವರ್ಗವನ್ನು ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಶರದ್ ಪವಾರ್ ತನ್ನ ಝಡ್-ಪ್ಲಸ್ ಭದ್ರತೆಯು ತನ್ನ ಮೇಲೆ ಕಣ್ಣಿಡುವ ಪ್ರಯತ್ನ ಎಂದು ಶಂಕಿಸಿದ್ದಾರೆ.
"ಮೂವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ನನಗೆ ತಿಳಿಸಿದರು. ಅವರಲ್ಲಿ ನಾನೂ ಒಬ್ಬ. ಇನ್ನಿಬ್ಬರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಂದು ತಿಳಿಸಿದ್ದಾರೆ. ಬಹುಶಃ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ, ನನ್ನ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯಲು ಒಂದು ವ್ಯವಸ್ಥೆಯಾಗಿರಬಹುದು" ಎಂದು ಅವರು ವ್ಯಂಗ್ಯವಾಡಿದ್ದಾರೆ.