ಕೋಲ್ಕತ್ತಾ, ಆ.22 (DaijiworldNews/AK) : ತರಬೇತು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ಮುಂದುವರಿಸಿದೆ. ಘಟನೆ ಖಂಡಿಸಿ ಕಳೆದ ಕೆಲ ದಿನಗಳಿಂದ ನಡೆಸ್ತಿರುವ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಸೂಚನೆ ನೀಡಿದೆ.
ಕರ್ತವ್ಯ ಮಾಡುತ್ತಲೇ ಮುಷ್ಕರ ನಡೆಸ್ತಿರೋದಾಗಿ ವೈದ್ಯರ ಸಂಘ ತಿಳಿಸಿದೆ. ಇದೇ ವೇಳೆ ಯುವ ವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಸಿಬಿಐ ಸಲ್ಲಿಸಿದೆ.
ಅತ್ಯಾಚಾರ & ಹತ್ಯೆ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಅಪ್ಪ-ಅಪ್ಪನಿಗೂ ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸುವ ಪ್ರಯತ್ನವೂ ಆಗಿತ್ತು. ಶವ ದಹನದ ಬಳಿಕವೇ ಎಫ್ಐಆರ್ ದಾಖಲಿಸಿದರು. ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನ ಧ್ವಂಸ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಘಟನೆ ನಡೆದ 5ನೇ ದಿನ ತಮ್ಮ ಕೈಗೆ ತನಿಖಾ ವರದಿಯನ್ನು ಪೊಲೀಸರು ಸಲ್ಲಿಸಿದ್ರು. ಅಷ್ಟರೊಳಗೆ ಸಾಕಷ್ಟು ವರದಿಗಳನ್ನು ಬದಲಾಯಿಸಿದ್ರು ಎಂದು ಸಾಲಿಸಿಟರ್ ಜನರೆಲ್ ಆರೋಪಿಸಿದರು. ಈ ನಡುವೆ ಯುವವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಒಬ್ಬನೇ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ.