ಬೆಂಗಳೂರು, ಆ.22 (DaijiworldNews/TA): ಸಿದ್ದರಾಮಯ್ಯ ಅಲ್ಲ, ಮೊದಲು ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಕುತಂತ್ರದಿಂದ ಎಸ್ಐಟಿ ಲೋಕಾಯುಕ್ತ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರೋದು ಸರ್ಕಾರ ಅಲ್ಲ. ಲೋಕಾಯುಕ್ತ ಎಸ್ಐಟಿ. ಎಸ್ಐಟಿ ಅನುಮತಿ ಕೇಳಿರೋದಕ್ಕೆ ಸಿದ್ದರಾಮಯ್ಯ ಯಾಕೆ ಮಧ್ಯೆ ಬರುತ್ತಾರೆ?.
ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ಅವರು ದೂರು ಕೊಟ್ಟಿದ್ದಕ್ಕೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟರು. ಕುಮಾರಸ್ವಾಮಿ ವಿರುದ್ಧ ಎಸ್ಐಟಿ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದೆ. ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಸ್ವಾಮಿ ಕುಮಾರಸ್ವಾಮಿ ಅವರೇ ನಿಮಗೆ ಸಿದ್ದರಾಮಯ್ಯ ಬಗ್ಗೆ ಮಾತಾಡೋಕೆ ನೈತಿಕ ಹಕ್ಕು ಏನಿದೆ? ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಇದರಲ್ಲಿ ತಪ್ಪೇನು ಇದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಯಾವುದೇ ಜಾಗ ತೆಗೆದುಕೊಂಡಿಲ್ಲ. ಬದಲಿ ಜಾಗ ಕೊಡಿ ಎಂದು ಅವರ ಶ್ರೀಮತಿ ಪತ್ರ ಬರೆದಿದ್ದರು. ಪತ್ರದ ಪ್ರಕಾರ ಬಿಜೆಪಿಯ ಅವಧಿಯಲ್ಲಿ ಸೈಟ್ ಕೊಟ್ಟಿರೋದು. ಮೊದಲು ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.