ಬಂಟ್ವಾಳ, ನ 27: ಯಾಸಿರ್ ಕಲ್ಲಡ್ಕ ಅವರ ಬಹುಕಾಲದ ಪರಿಶ್ರಮದ ಫಲವಾಗಿ ಪುರಾತನ ವಸ್ತುಗಳ ಸಂಗ್ರಹಾಲಯವೊಂದನ್ನು ಮಾಡಿದ್ದು , ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಯು.ಟಿ.ಖಾದರ್, ಇಂತಹಾ ಸಾಧನೆಗೆ ಇಚ್ಛಾಶಕ್ತಿ ಅತೀಮುಖ್ಯ, ತಾಳ್ಮೆ -ಛಲ ಇದ್ದಾಗ ಮಾತ್ರ ಇಂತಹಾ ಕಾರ್ಯಕ್ಕೆ ಪ್ರೇರಣೆ ದೊರೆಯುತ್ತದೆ.. ಯಾಸಿರ್ ಇಂತಹಾ ಸಾಧನೆ-ಸಾಹಸದ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಈ ವಸ್ತು ಸಂಗ್ರಹಾಲಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ, ಅವಕಾಶ ದೊರೆತಾಗ ಮುಖ್ಯಮಂತ್ರಿಗಳನ್ನೂ ಈ ಸಂಗ್ರಹಾಲಯಕ್ಕೆ ಕರೆದುಕೊಂಡು ಬರುತ್ತೇನೆ ಎಂದ ಅವರು, ಯಾಸಿರ್ರ ಶ್ರಮ ಮತ್ತಷ್ಟು ಮಂದಿಗೆ ಪ್ರೇರಣೆಯಾಗಲಿ ಎಂದರು. ಬೆಂಗಳೂರು ಹಾಗೂ ದೆಹಲಿಯಲ್ಲಿ ಯಾಸಿರ್ ವಸ್ತು ಸಂಗ್ರಹಾಲಯದ ವಸ್ತುಗಳ ಪ್ರದರ್ಶನಕ್ಕೆ ಸಚಿವನ ನೆಲೆಯಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಸಚಿವರ ಜೊತೆ ಜಿಲ್ಲಾ ವಕ್ಪ್ಬೋರ್ಡ್ ಸದಸ್ಯ ರಶೀದ್ ವಿಟ್ಲ, ಹಿದಾಯ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ, ಮಾಣಿಬಾಲವಿಕಾಸ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ, ರಾಜ್ಯಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ಐಡಾಸುರೇಶ್, ಪುತ್ತೂರು ಯುವಕಾಂಗ್ರೇಸ್ ಅಧ್ಯಕ್ಷ ಯು.ಟಿ.ತೌಸೀಫ್, ಗ್ರಾ.ಪಂ.ಸದಸ್ಯ ಯೂಸುಫ್, ಬ್ಯಾರಿ ಅಕಾಡೆಮಿ ಮಾಜಿ ಸದಸ್ಯರಾದ ಲತೀಫ್ ನೇರಳಕಟ್ಟೆ, ಅಬ್ದುಲ್ ಹಮೀದ್, ಹಮೀದ್ ಕಲ್ಲೆಗ, ಅಬೂಬಕರ್ ಮುರಬೈಲು, ಡಿ.ಕೆ.ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.
ಗುಮುಖದ ಯುವಕ ಮಹಮ್ಮದ್ ಯಾಸಿರ್- ಯುವ ಉದ್ಯಮಿಯೂ ಹೌದು. ಈ ಮೌನ ಸಾಧನೆಗೆ ತಾನು ಕಲಿತ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯೇ ಪ್ರೇರಣೆಯಂತೆ. ತಾನು ೯ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಕಲಾ ಸಂಗ್ರಾಹಕ್ಕೆ ನೀಡಿದ ಪ್ರೇರೇಪಣೆ ತನ್ನನ್ನು ಹಳೆಯ ವಸ್ತುಗಳ ಸಂಗ್ರಹಕ್ಕೆ ಹಚ್ಚುವಂತೆ ಮಾಡಿದೆ ಎಂದು ಅಭಿಮಾನದಿಂದ ಹೇಳಿಕೊಳ್ಳುವ ಯಾಸಿರ್, ಕಳೆದ ೧೫ ವರ್ಷಗಳಿಂದ ಹಳೆಯ ವಸ್ತು ಸಂಗ್ರಹಕ್ಕೆ ತೊಡಗಿಕೊಂಡಿದ್ದು, ಅದರಲ್ಲಿಯೂ ನಾಣ್ಯ, ಕರೆನ್ಸಿ ಹಾಗೂ ಅಂಚೆ ಚೀಟಿ ಸಂಗ್ರಹಕ್ಕೆ ಮಹತ್ವ ನೀಡುತ್ತಿದ್ದಾರೆ. ವಸ್ತು ಸಂಗ್ರಾಹಕರ ಪರಿಚಯದ ಮೂಲಕ ಈಗ ಜಗತ್ತಿನ ಮೂಲೆಮೂಲೆಯಿಂದ ಎಷ್ಟೇ ಕಷ್ಟವಾದರೂ ಸಂಗ್ರಹಿಸುತ್ತಿದ್ದೇನೆ. ಎಲ್ಲಾ ಸಂಗ್ರಾಹಕ್ಕೂ ಸರಿಯಾದ ತೆರಿಗೆಯನ್ನೂ ಪಾವತಿಸಿದ್ದೇನೆ. ಇದು ತನಗೆ ಖುಷಿ ಕೊಡುತ್ತಿದೆ. ಇವುಗಳ ಸಂಗ್ರಹಕ್ಕಿಂತಲೂ, ನಿರ್ವಹಣೆ, ಜೋಡಣೆ ಕಷ್ಟದ ಕೆಲಸ , ಆದರೂ ಖುಷಿಯಿಂದ ಮಾಡುತ್ತೇನೆ ಎಂದು ನಗುನಗುತ್ತಲೇ ಅಭಿಪ್ರಾಯ ವ್ಯಕ್ತಪಡಿಸಿದರು.