ನವ ದೆಹಲಿ : ಹೈನುಗಾರಿಯನ್ನೇ ನಂಬಿಕೊಂಡು ಬದುಕುತ್ತಿದ್ದ ಶಭು ದಯಾಳ್ ಎಂಬ ಅನಕ್ಷರಸ್ಥನಿಗೆ 13 ವರ್ಷಗಳ ನಂತರ 20 ಲಕ್ಷ ರೂ. ಪರಿಹಾರ ಒದಗಿಸುವಂತೆ ರಾಷ್ಟ್ರೀಯ ಗ್ರಾಹಕರ ಆಯೋಗವು ತೀರ್ಪು ನೀಡಿದೆ. ಜಾನುವಾರುಗಳಿಗೆ ಚಿಕಿತ್ಸೆ ನೀಡಿದ ಸರಕಾರಿ ವೈದ್ಯರು ಮತ್ತು ದಿಲ್ಲಿ ಸರಕಾರದ ಪಶು ಸಂಗೋಪನಾ ಇಲಾಖೆಗಳು ಜಂಟಿಯಾಗಿ ಈ ಪರಿಹಾರ ಮೊತ್ತವನ್ನು ಅರ್ಜಿದಾರ ಶಭು ದಯಾಳ್ಗೆ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ. 2004ರಲ್ಲಿ ಅವರ 22 ಜಾನುವಾರು ಚಿಕಿತ್ಸೆ ಕೊಡಿಸಲೆಂದು ಪಶು ಆರೋಗ್ಯ ಕೇಂದ್ರಕ್ಕೆ ಒಯ್ದಿದ್ದರು. ಆದರೆ ಸೂಕ್ತ ಚಿಕಿತ್ಸೆ ದೊರಕದ ಕಾರಣ ಮೂರು ದಿನ ಗಳಲ್ಲಿ 19 ಜಾನುವಾರುಗಳು ಸತ್ತು ಹೋಗಿತ್ತು. ಹೀಗಾಗಿ ಅವರು 45 ವರ್ಷಗಳಿಂದ ನೆಚ್ಚಿಕೊಂಡು ಬಂದಿದ್ದ ಹೈನುಗಾರಿಕೆ ಕಾಯಕವನ್ನೇ ತೊರೆಯಬೇಕಾಯಿತು. ಜಾನುವಾರುಗಳು ತೀವ್ರ ಸ್ವರೂಪದ ಶೀತದಿಂದ ಸತ್ತಿವೆ ಎಂದು ವೈದ್ಯರು ಹೇಳಿದ್ದರು.ಆದರೆ ಇದನ್ನು ತಳ್ಳಿ ಹಾಕಿದ ಆಯೋಗ ಇದಕ್ಕೆ ಸೂಕ್ತ ದಾಖಲೆ ಗಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡಿಲ್ಲದ್ದಕ್ಕೆ ಏಕೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.