ಉಡುಪಿ, ನ 26: ಇಂದು, ಭಾರತೀಯ ಗೋವಂಶದ ಗೋಮೂತ್ರ, ಗೋಮಯದಲ್ಲಿರುವ ಔಷದಿಯ ಗುಣಗಳು ಮನುಷ್ಯನ ಆರೋಗ್ಯದ ರಕ್ಷಣೆಗೆ ಸಹಾಯಕವಾಗುವುದರ ಜತೆಗೆ ಕೃಷಿಗೆ ಹಾನಿಕಾರಕವಾದ ಕೀಟಾಣುಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ ಎಂದು ವೈಜಾನಿಕತೆಯ ಆಧಾರಗಳಿಂದ ದೃಢಪಟ್ಟಿದೆ. ಗೋಮೂತ್ರ ಹಾಗೂ ಗೋಮಯಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಆದರಿಂದ ಭಾರತದ ಸಮಗ್ರ ವಿಕಾಸ ಹಾಗೂ ದೇಶದಲ್ಲಿ ಶ್ವೇತಕ್ರಾಂತಿ ತರುವುದಕ್ಕಾಗಿ ಭಾರತೀಯ ತಳಿಯ ಗೋವಂಶದ ಸಂರಕ್ಷಣೆ ಹಾಗೂ ಸಂವರ್ಧನೆ ಅತ್ಯಂತ ಅವಶ್ಯಕವಾಗಿದೆ.
ಸಂಪೂರ್ಣ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಗೋವಂಶಹತ್ಯೆಯ ನಿಷೇಧ ಆಗಬೇಕೆಂದು ಹಿಂದೂ ಸಮಾಜದ ಹಾಗೂ ಸಂತರ ಬೇಡಿಕೆಯಾಗಿರುತ್ತದೆ. ಭಾರತದ ಸಂವಿಧಾನ ಹಾಗೂ ನ್ಯಾಯ ವ್ಯವಸ್ಥೆ ಯಾವಾಗಲೂ ಗೋಹತ್ಯೆ ನಿಷೇಧಗೊಳಿಸುವ ಪ್ರಬಲ ಕಾನೂನಿನ ಪರವಾಗಿಯೆ ಇದೆ. ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಮೊದಲಿನಿಂದಲೂ ಇದೆ. ಆದರೆ ದೇಶದಲ್ಲಿ ಕಾನೂನಿನ ಉಲ್ಲಂಘನೆಯಾಗುತಿದೆ. ಒಂದಿಲ್ಲೊಂದು ರೀತಿಯಿಂದ ಕೇರಳ, ಬಂಗಾಳ ತಮಿಳುನಾಡು, ಇತ್ಯಾದಿ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ಗೋಹತ್ಯೆ ಗೋಮಾಂಸ ವಿತರಣೆ, ಮಾಡಿರುವುದನ್ನು ಸಂತ ಸಮಾಜ ಕಠೋರ ಶಬ್ಧಗಳಿಂದ ಖಂಡಿಸುತ್ತದೆ.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ದೇಶದ ಎಲ್ಲ ಕಸಾಯಿಖಾನೆಗಳನ್ನು ಮುಚ್ಚುವಂತೆ ಧರ್ಮಸಂಸತ್ತು ಕೇಂದ್ರ ಸರ್ಕಾರಕ್ಕೆ ಕರೆನೀಡುತ್ತದೆ. ಕಳ್ಳತನದಿಂದ ಗೋಮಾಂಸ ನಿರ್ರ್ಯಾತ ಮಾಡುವುದನ್ನು ತಪ್ಪಿಸಲು ಬಂದರುಕಟ್ಟೆಗಳಲ್ಲಿ ಡಿ.ಎನ್.ಎ ಪರಿಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಜುಲ್ಮಾನೆ ಅಜೀವ ಕಾರ್ಯಗೃಹವಾಸ ಹಾಗು ಅವರ ಅನುಮತಿ ರದ್ದು ಪಡಿಸುವಂತಹ ಕಠಿಣ ಶಿಕ್ಷೆ ವಿದಿಸಬೇಕು.
ಗೋರಕ್ಷಣೆ ಗೋಸೇವೆ ಅವಿಭಾಜ್ಯ ಅಂಗವಾಗಿದೆ. ಇದರ ಮಹತ್ವವನ್ನು ಅರಿತ ಮಹಾತ್ಮಗಾಂದಿಜಿಯವರು ಗೋರಕ್ಷಣೆಯ ಹೊರತಾದ ಸ್ವರಾಜ್ಯ ಅಪೂರ್ಣವಾಗಿರುತ್ತದೆ.
ಜಗದ್ಗೂರು ಶಂಕರಾಚಾರ್ಯ ನಿರಂಜನದೇವ ತೀರ್ಥರು ಪ್ರಬುದತ್ತ ಭ್ರಮಾರಿಚಾರಿಯವರು ಪಂಡಿತ ರಾಮಚಂದ್ರ ವೀರ ಮಹಾರಾಜರು ಮತ್ತು ಆಚಾರ್ಯ ವಿನೋಭಭಾವೆಯವರು ಗೋರಕ್ಷಣೆಗಾಗಿ ಕೇಂದ್ರೀಯ ಕಾನೂನು ತರುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಗ್ರಹ ಮಾಡಿದ್ದರು. ಪಂಡಿತ ದೀನ ದಯಾಳು ಉಪಾದ್ಯಯರು ಗೋವಂಶ ಆಧಾರಿತ ಕೃಷಿಯಿಂದ ಭಾರತದ ಉಜ್ವಲ ಭವಿಷ್ಯದ ಕನಸು ಕಂಡಿದ್ದರು. ಗೋರಕ್ಷಣೆ ಆಗದೆ ಅದು ಸಾದ್ಯವಾಗದು
ದರ್ಮ ಸಂಸದ ಗೋಮಾಳವನ್ನು ಮುಕ್ತಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕರೆನಿಡುತ್ತದೆ. ಗೋವುಗಳ ಸುರಕ್ಷತೆಗಾಗಿ ಸರ್ಕಾರದ ವತಿಯಿಂದ ಗೋ ಅಭಯಾರಣ್ಯಗಳನ್ನು ನಿರ್ಮಿಸಬೇಕು.ಭಾರತೀಯ ಗೊಹತ್ಯೆಯ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಯಬೇಕು. ತಳಿ ಅಭಿವೃದ್ದಿ, ಹೈನು ವೃದ್ದಿ ಪಂಚಗವ್ಯ ಔಷಧಿಯ ಪ್ರಯೋಗ ಇತ್ಯದಿ ಕುರಿತು ಅರಿವು ಮೂಡಿಸಬೇಕು. ಭಾರತೀಯ ತಳಿಯನ್ನು ಉಳಿಸಿ ಬೆಳೆಸಲು ಮೂಲತಳಿ ಅಭಿವೃದ್ದಿ ಕೇಂದ್ರಗಳಲ್ಲಿ ಭರತೀಯ ತಳಿಯ ಹೋರಿಗಳ ಸಂತತಿ ಉತ್ಪತಿಯಾಗುವಂತೆ ವ್ಯವಸ್ಥೆಮಾಡಬೆಕು. ಗೋವಂಶ ಆಧಾರಿತ ಕೃಷಿಪದ್ದತಿಯನ್ನು ಶಿಕ್ಷಣದ ಪಠ್ಯಪುಸ್ತಕದಲ್ಲಿ ಸೇರಿಸಬೆಕು. ಭಾರತೀಯ ತಳಿಗಳ ಉತ್ಪತ್ತಿಗಳ ಮಾರಾಟಕ್ಕೆ ಗುರುತಿನ ಚೀಟಿ ನಿರ್ಧರಿಸಬೇಕು ಕೇಂದ್ರ ಸರ್ಕಾರ ಹಾಗೂ ನ್ಯಾಯಲಯದ ಆದೇಶನುಸಾರ ನೇಮಿಸಲಾದ ನೋಡಲ್ ಅಧಿಕಾರಿಗಳು ಕಾರ್ಯಪರಿದಿ ವಿಸ್ತರಿಸಿ ಗೋಕಳ್ಳ ಗೋ ಹಂತಕರ ಮೇಲೆ ನಿಗವಿಡಬೇಕು.ಗೋಕಳ್ಳ ಸಾಗಾಟ ತಡೆಯುವುದಕ್ಕೆ ಜಿಲ್ಲಾಧಿಕಾರಿಗಳು ನೀಡುವ ಅನುಮತಿ ಪತ್ರವನ್ನು ಕಂಪ್ಯೂಟರೀಕರಣ ಮಾಡಬೇಕು. ಕಾನೊನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ದ ಕಠಿಣ ಕ್ರಮ ಕೈಗೂಳ್ಳಬೇಕು . ಹಿಂದೂ ಸಮಾಜ ಭಾಂದವರು ಗೋರಕ್ಷಣೆ ಗೋಪಾಲನೆ ಕುರಿತು ಜಾಗೃತರಾಗಬೇಕು. ಹಾಲ ಕರೆದು ಕೊಂಡು ಆಕಳನ್ನು ರಸ್ತೆಯಲ್ಲಿ ಬಿಡುವುದು ಮಹಾಪಾಪ ಹಾಗೆ ಮಾಡಬಾರದು. ಪ್ರತಿಯೊಬ್ಬ ನಾಗರಿಕರು ಒಂದೊಂದು ಆಕಳನ್ನು ದತ್ತು ಪಡೆದು ಅದರ ಖರ್ಚಿನ ನಿರ್ವಹಣೆ ವಹಿಸಿಕೂಳ್ಳಬೆಕು. ಕುಟುಂಬದ ಕಾರ್ಯಕ್ರಮಗಳಲ್ಲಿ ಭಾರತೀಯ ಗೋತಳಿಯ ಪಂಚಗವ್ಯವನ್ನೆ ಬಳಸಬೇಕು ಎಂದು ಧರ್ಮ ಸಂಸದ್ ಕರೆನೀಡುತ್ತದೆ.