ಉಡುಪಿ, ಆ.13(DaijiworldNews/AK):ಉಡುಪಿಯ ನಗರಸಭೆ ಮತ್ತು ಗ್ರಾಮಾಂತರ ಭಾಗದ ಹೊವು ರಸ್ತೆಗಳು ತೀವ್ರ ಹದಗೆಟ್ಟಿದ್ದು,ಇವುಗಳನ್ನು ಶೀಘ್ರದಲ್ಲಿಯೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಉಡುಪಿ ನಗರದ ಸುತ್ತಮುತ್ತಲಿನ ಹಾಗೂ ರಾಜ್ಯದ ಅತೀ ದೊಡ್ಡ ಮೀನುಗಾರಿಕಾ ಬಂದರು ಪ್ರದೇಶ ಹಾಗೂ ಪ್ರವಾಸೋದ್ಯಮ ನಾಡಾಗಿರುವ ಮಲ್ಲೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು ಸಾರ್ವಜನಿಕರಿಗೆ ಸಂಚಾರಿಸಲು ಕಷ್ಟಕರವಾಗಿದೆ.
ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸ್ಥಿತಿ ಅಯೋಮಯವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಿಂದ ಉಡುಪಿ ಮಾರ್ಗವಾಗಿ ಸಂಚರಿಸುವ ಬಹುತೇಕ ಎಲ್ಲಾ ರಸ್ತೆಗಳು ಹೊಂಡಮಯವಾಗಿದೆ.
ಮುಂದೆ ಸಾಲುಸಾಲಾಗಿ ಬರುವ ಹಬ್ಬಗಳಾದ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಹಬ್ಬಗಳು ಬಂದುದರಿಂದ ಸಾರ್ವಜನಿಕವಾಗಿ ಹಾಗೂ ಹೆಚ್ಚಿನ ಮನೆಗಳಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹಗಳನ್ನು ವಿಸರ್ಜನೆ ಮಾಡಲು ಇದೆ ರಸ್ತೆಗಳಲ್ಲಿ ಸಂಚರಿಸುವುದರಿಂದ ಮುಂಜಾಗೃತೆಯಾಗಿ ಈ ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ತಾವೂ ತಕ್ಷಣ ಉಡುಪಿ ನಗರಸಭೆಗೆ, ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಆದಷ್ಟು ಬೇಗನೇ ದುರಸ್ಥಿ ಮಾಡಿಕೊಡುವಂತೆ ಸೂಚನೆ ನೀಡಬೇಕಾಗಿ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್,ಗಣೇಶ್ ನೆರ್ಗಿ,ಸತೀಶ್ ಕುಮಾರ್ ಮಂಚಿ,ಶರತ್ ಶೆಟ್ಟಿ, ಸತೀಶ್ ಕೊಡವೂರು, ಶಶಿರಾಜ್ ಕುಂದರ್, ಆನಂದ ಪೂಜಾರಿ, ಮೀನಾಕ್ಷಿ ಮಾಧವ, ಕೃಷ್ಣ ಹೆಬ್ಬಾರ್, ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ,ಸಂಧ್ಯಾ ತಿಲಕರಾಜ್ ,ಸತೀಶ್ ಪುತ್ರನ್,ಹಮ್ಮದ್, ಸುರೇಂದ್ರ ಆಚಾರ್ಯ, ಸದಾನಂದ ಮೂಲ್ಯ ಅರ್ಚನಾ ದೇವಾಡಿಗ, ಆಶಾ ಚಂದ್ರಶೇಖರ್,ಹಸನ್ ಅಜ್ಜರಕಾಡು ಉಪಸ್ಥಿತರಿದ್ದರು.