ಸುಳ್ಯ, ಆ.13(DaijiworldNews/AA): ಸಕಲೇಶಪುರ ಸಮೀಪದ ಆಚಂಗಿಯಲ್ಲಿ ರೈಲು ಹಳಿ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಮತ್ತಷ್ಟು ಭೂಕುಸಿತದಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ.
ಸಕಲೇಶಪುರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭೂಕುಸಿತ ಸಂಭವಿಸಿದ ಸ್ಥಳ ಅಪಾಯಕಾರಿಯಾಗಿದೆ. ಹಳಿಗಳ ಮೇಲೆ ಬಂಡೆಗಳು ಬೀಳುವುದರಿಂದ ಮತ್ತಷ್ಟು ಭೂಕುಸಿತದ ಭೀತಿ ಎದುರಾಗಿದೆ. ಇನ್ನೂ ಕೆಲ ದಿನಗಳ ಕಾಲ ಕಾಮಗಾರಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.