ಉಡುಪಿ,ಆ. 12 (DaijiworldNews/AK): ಕಳೆದ 15 ದಿನಗಳ ಹಿಂದೆ ಎಂಜಿಎಂ-ಚಕ್ರತೀರ್ಥ-ದೊಡ್ಡಣಗುಡ್ಡ ಸಂಪರ್ಕ ರಸ್ತೆ ಕುಸಿದು ಬಿದ್ದು ಸಂಚಾರವೇ ಸ್ಥಗಿತಗೊಂಡಿತ್ತು. ಇದೀಗ ಸಗ್ರಿ ಶಾಲೆ ಸಂಪರ್ಕ ಕಡಿತಗೊಂಡಿದ್ದು ಇಲ್ಲಿನ ಮೋರಿ ಕುಸಿದು ಬಿದ್ದಿರುವುದರಿಂದ ಸ್ಥಳೀಯ ಸಂಚಾರವೇ ಅಸ್ತವ್ಯಸ್ತಗೊಂಡಿದೆ.
ಸಗ್ರಿ ಶಾಲೆ ಸಂಪರ್ಕ ರಸ್ತೆಯ ಮಳೆ ನೀರು ಹರಿಯುವ ಕಾಲುವೆಗೆ ನಿರ್ಮಿಸಿದ್ದ ಕಿರು ಸೇತುವೆ ಶಿಥಿಲಗೊಂಡು ಕುಸಿದಿದೆ. ಪರಿಣಾಮ ಇಂದ್ರಾಳಿ ಮೂಲಕ ಸಗ್ರಿ ಶಾಲೆ ಕಡೆಗೆ ತೆರಳುವ ಸಾವಿರಾರು ಮಂದಿ ಇದರಿಂದ ನಿತ್ಯ ತೊಂದರೆ ಒಳಪಡುವಂತಾಗಿದೆ. ಇಂದ್ರಾಳಿ, ಎಂಜಿಎಂ, ಪರಂಪಳ್ಳಿ, ಸಗ್ರಿ, ಮಣಿಪಾಲ, ಲಕ್ಷ್ಮೀಂದ್ರ ನಗರ ದೊಡ್ಡಣಗುಡ್ಡ ಅಂಬಾಗಿಲು ಕೇಂದ್ರೀಕೃತವಾಗಿ ಓಡಾಡುವರಿಗೆ ಈ ಕಿರು ಸೇತುವೆ ಮಾರ್ಗ ಉತ್ತಮ ರಸ್ತೆಯಾಗಿತ್ತು.
ಇದೀಗ ಕಿರು ಸೇತುವೆ ಕುಸಿತ ಬಳಿಕ ಸದ್ಯಕ್ಷೆದ್ದಿಪತ್ರ ವಾಹನಗಳು ಓಡಾಡುತ್ತಿವೆ. ಕಾರು, ರಿಕ್ಷಾ ಓಡಾಟಕ್ಕೆ ಸೂಕ್ತವಾಗಿಲ್ಲ ಶಿಕ್ಷಣ, ಉದ್ಯೋಗ, ಆರೋಗ್ಯ ಸಂಬಂಧಿಸಿ ಈ ಮಾರ್ಗದಲ್ಲಿ ಸಾಕಷ್ಟು ಮಂದಿ ಓಡಾಡುತ್ತಾರೆ. ಪ್ರಸ್ತುತ ಕಿರು ಸೇತುವ ಕುಸಿದ ಬಿದ್ದಿರುವ ಕಾರಣ ಎಲ್ಲರೂ ಸುತ್ತಿಬಳಸಿಕೊಂಡು ಓಡಾಡಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.
ನಗರದ ಒಳ ರಸ್ತೆಗಳಲ್ಲಿ ಮಳೆ ನೀರು ಕಾಲುವೆ ಹರಿಯುವ ರಸ್ತೆಗಳಿಗೆ ಹಲವಾರು ವರ್ಷಗಳ ಹಿಂದೆ ನಿರ್ಮಿಸಲಾದ ಕಿರುಸೇತುವೆಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಸೂಚನೆ ನೀಡಲಾಗಿದೆ. 15 ದಿನದ ಒಳಗೆ ವರದಿ ನೀಡುವಂತೆ ತಿಳಿಸಲಾಗಿದೆ. ದುಸ್ಥಿತಿಯಲ್ಲಿರುವ ಕಿರು ಸೇತುವೆಯನ್ನು ತೆರವುಗೊಳಿಸಿ ಹೊಸ. ಕಿರು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ
ಸಗ್ರಿ ಶಾಲೆ ಸಂಪರ್ಕರಸ್ತೆಕಿರು ಸೇತುವೆ ಕುಸಿದಿರುವುದರಿಂದ ರಸ್ತೆ ತಾತ್ಕಲಿಕವಾಗಿ ಸಂಚಾರ ನಿಷೇಧಿಸಲಾಗಿದೆ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಕಿರು ಸೇತುವೆ ಅಭಿವೃದ್ಧಿಗೆ ಶೀಘ್ರ ಕ್ರಮವಹಿಸಲಾ ಗುವುದು. ಚಕ್ರತೀರ್ಥ ಬಳಿ ಕುಸಿದ ಕಿರುಸೇತುವೆ ಮರು ನಿರ್ಮಾಣ 13.50ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತರು ರಾಯಪ್ಪ ತಿಳಿಸಿದರು.