ಕುಂದಾಪುರ, ಮೇ 22 (Daijiworld News/MSP): ಎಲ್ಲ ಅಂದುಕೊಂದಂತೆ೨೩ರಂದು ಮದುವೆ ನಡೆಯಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಸ್ವತಃ ತಾನೇ ಮುಂದೆ ನಿಂತು ಮದುವೆ ಮಾಡಿಸಬೇಕಿದ್ದ ಸಹೋದರ ಈಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೊಳ್ಳಿಯಲ್ಲಿ ನಡೆದಿದೆ. ಅಕ್ಷಯ್ (24) ಸಾವಿಗೀಡಾದ ಯುವಕ.
ಅಕ್ಷಯ್ ಸಹೋದರಿಗೆ ಇದೇ 23 ರಂದು ಮದುವೆ ನಿಶ್ಚಯವಾಗಿತ್ತು. ಅದೇ ಕಾರ್ಯಕ್ರಮದ ತಯಾರಿಗೆ ಸಹೋದರ ನಾಡ ಸಮೀಪದ ಸೇನಾಪುರ ಎಂಬಲ್ಲಿ ಕುಳಿತಿದ್ದ ವೇಳೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಾರೆ ವೃತ್ತಿ ಮಾಡಿಕೊಂಡಿರುವ ಅಕ್ಷಯ್ ಸಹೋದರಿಯ ಮದುವೆಯ ತಯಾರಿಯಲ್ಲಿ ಸಹೋದರ ತಯಾರಿಗೆಂದು ಹೋಗಿದ್ದ ಎನ್ನಲಾಗಿದೆ.
ಇದೀಗ ಮದುವೆಗೆ ಎರಡೇ ದಿನ ಬಾಕಿ ಉಳಿದಿದ್ದು, ಸಹೋದರನ ಸಾವು ಮನೆಯಲ್ಲಿದ್ದವರನ್ನು ದುಃಖದ ಕೂಪಕ್ಕೆ ತಳ್ಳಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.