ಮೂಡಬಿದಿರೆ, ಆ. 12 (DaijiworldNews/AK):ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯ ಮತ್ತು ಭಾರತೀಯ ಕಥೊಲಿಕ ಯುವ ಸಂಚಲನ ಗಂಟಾಲ್ಕಟ್ಟೆ ಘಟಕ ಇದರ ಸಹಯೋಗದೊಂದಿಗೆ ಮೂಡಬಿದ್ರಿ ವಲಯದ ಯುವ ಜನರಿಗೆ ಒಂದು ದಿನದ ಮಾಹಿತಿ ಕಾರ್ಯಗಾರ “ಯವ ಎಕ್ತಾರ್ 2024” ಎಂಬ ಸಮಾಲೋಚನೆ ಸಭೆಯನ್ನು ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತ ಇಗರ್ಜಿಯ ಸಭಾಭವನದಲ್ಲಿ ಆ. 11 ನಡೆಯಿತು.
ಬೆಳಗಿನ ಜಾವ ಕಾರ್ಯಕ್ರಮವನ್ನು ಮೂಡಬಿದ್ರಿ ವಲಯದ ವಿಗಾರ್ ಜನರಲ್ ಹಾಗೂ ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯದ ನಿರ್ದೇಶಕರಾದ ಅತಿ ವಂದನೀಯ ಫಾದರ್ ಒನಿಲ್ ಡಿಸೋಜಾ ಉದ್ಘಾಟಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿತ್ಯ ಸಹಾಯಮಾತ ಇಗರ್ಜಿ ಗಂಟಾಲ್ಕಟ್ಟೆಯ ಧರ್ಮಗುರುಗಳಾದ ಫಾದರ್ ರೊನಾಲ್ಡ್ ಡಿಸೋಜಾ ಆಗಮಿಸಿ ನೆರೆದಿರುವ ಯುವಜನರನ್ನು ಉದ್ದೇಶಿಸಿ “ಯುವಜನರು ಮತ್ತು ಇಂದಿನ ಕ್ರೈಸ್ತ ಸಭೆ” ಎಂಬ ವಿಷಯದ ಕುರಿತು ಚರ್ಚಿಸಲಾಯಿತು.
ವೇದಿಕೆಯಲ್ಲಿ ಗಂಟಾಲ್ ಕಟ್ಟೆ ಚರ್ಚಿನ ಉಪಾಧ್ಯಕ್ಷರಾದ ಶ್ರೀ ಸುನಿಲ್ ಮಿರಾಂದ ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿ ಲಿಡಿಯಾ ಡಿಸೋಜಾ ಮತ್ತು 21 ಆಯೋಗದ ಸಂಚಾಲಕರಾದ ಅಲ್ವಿನ್ ಮೆನೇಜಸ್ ಮಂಗಳೂರು ಧರ್ಮ ಪ್ರಾಂತ್ಯದ ಐಸಿವೖಯಂ ಅಧ್ಯಕ್ಷರಾದ ವಿನ್ ಸ್ಟನ್ ಸಿಕ್ವೆರಾ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಐಸಿವೖಯಂ ಕೋಶಾಧಿಕಾರಿ ಹಾಗು ಮೂಡುಬಿದ್ರಿ ವಲಯದ ವಲಯ ನೋಡಲ್ ಅಧಿಕಾರಿಯಾದ ರೀನಾ ಕ್ರಾಸ್ತ, ಮೂಡಬಿದ್ರಿ ವಲಯದ ಅಧ್ಯಕ್ಷರಾದ ಜೆವಿನ್ ಡಿಸೋಜ ಕಾರ್ಯದರ್ಶಿ ಗ್ಲ್ಯಾನಿ ಕುಲಾಸೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆವಿನ್ ಡಿಸೋಜ ಸ್ವಾಗತಿಸಿದರು ಈಶಾನ್ ಮೆನೇಜಸ್ ವಂದಿಸಿದರು, ನಿಶಾನ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು ಯುವ ಜನರಿಗಾಗಿ ಈ ಸಂದರ್ಭದಲ್ಲಿ ವಿಶೇಷ ಬಲಿಪೂಜೆಯನ್ನು ಆಯೋಜಿಸಲಾಗಿತ್ತು ಈ ಬಲಿ ಪೂಜೆಯನ್ನು ಮಂಗಳೂರಿನ ಧರ್ಮ ಪ್ರಾಂತದ ಐಸಿವೖಯಂ ನಿರ್ದೇಶಕರಾದ ಫಾದರ್ ಅಶ್ವಿನ್ ಕರ್ಡೋಜಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಮೂಡುಬಿದ್ರಿ ವಲಯದ 150 ಯುವ ಜನರು ಭಾಗವಹಿಸಿದರು.