ಉಡುಪಿ, ಆ.11(DaijiworldNews/AA): ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿ ಪ್ರಾರಂಭವಾಗಿ 2 ತಿಂಗಳು ಕಳೆದರೂ ಪ್ರಥಮ ಪಿಯುಸಿಯ ವಿಜ್ಞಾನ, ವಾಣಿಜ್ಯ ವಿಭಾಗದ ಕೆಲ ಪಠ್ಯ ಪುಸ್ತಕಗಳು ಇನ್ನೂ ಪೂರೈಕೆಯಾಗುತ್ತಿಲ್ಲ ಎಂಬ ಕೇಳಿಬಂದಿದೆ.
ವಿಜ್ಞಾನದ ಹೆಚ್ಚಿನ ವಿಷಯಗಳಿಗೆ, ಎನ್ಸಿಇಆರ್ಟಿ ಪಠ್ಯ ಪುಸ್ತಕವನ್ನು ಸೂಚಿಸಲಾಗುತ್ತದೆ. ಆದರೆ, ಪಠ್ಯ ಪುಸ್ತಕಗಳು ಇನ್ನೂ ಲಭ್ಯವಾಗದ ಕಾರಣ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನಾನುಕೂಲತೆಗೆ ಒಳಗಾಗಿದ್ದಾರೆ ಎಂದು ಉಪನ್ಯಾಸಕರು ಮಾಹಿತಿ ನೀಡಿದ್ದಾರೆ.
ಮನಃಶಾಸ್ತ್ರ, ಕಂಪ್ಯೂಟರ್ಸೈನ್ಸ್ ಹಾಗೂ ಸ್ಟಾಟಸ್ಟಿಕ್ಸ್ ಸಂಬಂಧಿಸಿದ ಪಠ್ಯಪುಸ್ತಕಗಳು ಲಭ್ಯವಿಲ್ಲ. ಆದಷ್ಟು ಬೇಗ ಪಠ್ಯ ಪುಸ್ತಕ ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಉಪನ್ಯಾಸಕರು ಆಗ್ರಹಿಸಿದ್ದಾರೆ.