ಸುಳ್ಯ, ಆ.10(DaijiworldNews/AA): ಅರಂತೋಡು ಮುಖ್ಯಪೇಟೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕಲ್ಲೆಸುತ್ತಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಾರ್ವಜನಿಕರು ಗೂನಡ್ಕ ಬಳಿ ಅವನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ವರದಿಯಾಗಿದೆ.
ಸುಳ್ಯದಿಂದ ನಡೆದುಕೊಂಡು ಬಂದ ಮಾನಸಿಕ ಅಸ್ವಸ್ಥ ವ್ಯಕ್ತಿ ಅರಂತೋಡು ಪೇಟೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ರಿಕ್ಷಾಗಳಿಗೆ, ವ್ಯಕ್ತಿಗಳಿಗೆ ಕಲ್ಲೆಸೆದು ಭಯವನ್ನು ಹುಟ್ಟಿಸುತ್ತಿದ್ದ. ಅರಂತೋಡು ಪೇಟೆಯನ್ನು ದಾಟಿ ಪಯಸ್ವಿನಿ ಎಂಟರ್ಪ್ರೈಸಸ್ ಹತ್ತಿರ ಸಾರ್ವಜನಿಕರಿಗೆ ಕಲ್ಲೆಸೆದು ಕಂಡು ಅವರು ಕಲ್ಲುಗುಂಡಿ ಹೊರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅವನನ್ನು ಕಲ್ಲು ಗುಂಡಿ ಕಡೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.