ಮಂಗಳೂರು, ಆ.09(DaijiworldNews/AK): ಬೆಂದೂರ್ ವೆಲ್ ವಾರ್ಡ್ ವ್ಯಾಪ್ತಿಯ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕಾರ್ಪೊರೇಟರ್ ನವೀನ್ ಡಿಸೋಜ ನೇತೃತ್ವದ ಬೆಂದೂರ್ ವೆಲ್ ವಾರ್ಡ್ ನಿಯೋಗ ಶುಕ್ರವಾರ ಟ್ರಾಫಿಕ್ ಎಸಿಪಿ ಫಾರೂಕಿ ನಜ್ಮಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ವಾಸ್ ಲೇನ್, ಇ.ಎಸ್.ಐ ಆಸ್ಪತ್ರೆ ರಸ್ತೆ, ಎ.ಆರ್.ಲೇನ್, ಕಲ್ಪನಾ ರಸ್ತೆ, ಬೆಂದೂರ್ ವೆಲ್ ಜಂಕ್ಷನ್ ಹಾಗೂ ಕಂಕನಾಡಿ ಜಂಕ್ಷನ್ ನಲ್ಲಿ ಸಂಚಾರ ನಿಯಮ ಪಾಲನೆ ಮಾಡದೆ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗುತ್ತಿದ್ದು, ಜನಸಾಮಾನ್ಯರಿಗೆ, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಇಂತಹ ವಾಹನಗಳತ್ತ ಪೊಲೀಸ್ ಇಲಾಖೆ ನಿಗಾ ವಹಿಸಿ ದಂಡ ವಿಧಿಸಬೇಕು ಮತ್ತು ಟ್ರಾಫಿಕ್ ನಿರ್ವಹಣೆಗೆ ಎಐ ಕ್ಯಾಮರ ಅವಳಡಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ಬೆಂದೂರ್ ವೆಲ್ ವಾರ್ಡ್ ನ ಅರುಣ್ ಕ್ರಾಸ್ತ, ಪೂಜಾ ಶೆಟ್ಟಿ, ಪ್ರಕಾಶ್ ಪತ್ರಾವೊ, ಪ್ರೀತಂ ಪತ್ರಾವೊ ವರ್ನನ್ ಸಲ್ಡಾನ, ಅರುಣ್ ಡಿಸೋಜ, ಹೆಡ್ಮಂಡ್ ಡಿಸೋಜ ಉಪಸ್ಥಿತರಿದ್ದರು.