ಮಂಗಳೂರು, ಮೇ 22 (Daijiworld News/MSP): ಜಿಲ್ಲೆಯಲ್ಲಿ ಪಿಯುಸಿ ತರಗತಿಗಳು ಆರಂಭವಾದಂತೆ ಶಾಲಾ ತರಗತಿಗಳು ಕೂಡಾ ನಿಗದಿತ ದಿನದಂದೇ ಆರಂಭಗೊಳ್ಳಲಿದೆ. ಯಾವುದೇ ಬದಲಾವಣೆಗೆ ನಿರ್ದೇಶನ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್ ಹೇಳಿದರು.
ಯಾವುದೇ ಸಂಸ್ಥೆಯವರು ಬೇಡಿಕೆ ಇಟ್ಟರೆ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡುತ್ತೇವೆ ಎಂದು ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದರು. ತುಂಬೆಯಲ್ಲಿ ನೀರಿನ ಮಟ್ಟ 3.42 ಮೀ ಇದೆ ಮಳೆಯಾಗದಿದ್ದರೂ ಜೂ.10ರ ತನಕ ನಿರ್ವಹಣೆ ಮಾಡಬಹುದು ಎಂದರು.
ಮಂಗಳೂರು ಮಹಾನಗರದಲ್ಲಿ ಬಿರು ಬೇಸಿಗೆಯಿಂದ ನೀರಿನ ಅಭಾವ ಉಂಟಾಗಿರುವುದರಿಂದ ಈ ಶೈಕ್ಷಣಿಕ ವರ್ಷವನ್ನು ಒಂದು ವಾರ ತಡವಾಗಿ ಪ್ರಾರಂಭಿಸಬೇಕು ಎಂದು ಈ ಹಿಂದೆ ವೇದವ್ಯಾಸ್ ಕಾಮತ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಮಾತ್ರವಲ್ಲದೆ ಜಿಲ್ಲೆಯಲ್ಲಿ ತೀವ್ರ ಜಲಕ್ಷಾಮ ಉಂಟಾಗಿರುವ ಹಿನ್ನೆಲೆಯಲ್ಲಿ ಮೇ 20ರಂದು ಆರಂಭವಾಗಬೇಕಿದ್ದ ಪಿಯು ತರಗತಿಯನ್ನು ನಗರದ ಬಹುತೇಕ ಖಾಸಗಿ ಕಾಲೇಜುಗಳು ಜೂನ್ 1ಕ್ಕೆ ಮುಂದೂಡಿದೆ. ಆದರೆ ಸರ್ಕಾರಿ ಕಾಲೇಜಿನ ತರಗತಿ ಎಂದಿನಂತೆ ಆರಂಭವಾಗಿದೆ.