ಕಾಸರಗೋಡು,ಆ.08(DaijiworldNews/AK): ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಬೀಗ ಮುರಿದು ಕಳವಿಗೆತ್ನಿಸಿದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಕೋಜಿಕ್ಕೋ ಡ್ ತೋಟಿಲ್ ಪಾಳ ದ ಸನಿಶ್ ಜೋರ್ಜ್ (44) ಬಂಧಿತ ಆರೋಪಿ. ಡಿ ವೈ ಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಅಂಗಮಾಲಿ ಯಿಂದ ಬಂಧಿಸಿದೆ.
ಆಗಸ್ಟ್ ನಾಲ್ಕರಂದು ಮುಂಜಾನೆ ಕೃತ್ಯ ನಡೆದಿತ್ತು. ನ್ಯಾಯಾಲಯದ ಬೀಗ ಮುರಿದು ಒಳನುಗ್ಗಿದ ಈತ ಕಳವಿಗೆತ್ನಿಸಿದ್ದು , ಶಬ್ದ ಕೇಳಿ ಬೊಬ್ಬೆ ಹಾಕಿದಾಗ ಈತ ಪರಾರಿಯಾಗಿದ್ದನು.ಅದೇ ದಿನ ರಾತ್ರಿ ನಾಯಮ್ಮರಮೂಲೆ ಶಾಲೆಯ ಬೀಗ ಮುರಿದು ಒಳನುಗ್ಗಿದ ಈತ ೫೦೦ ರೂ . ನಗದನ್ನು ಕಳವುಗೈದಿದ್ದನು.. ಚೆಂಗಳದಲ್ಲಿ ಮರದ ಮಿಲ್ ನ ಕಚೇರಿಗೆ ನುಗ್ಗಿ 1. 84 ಲಕ್ಷ ರೂ .ಕಳವು ಮಾಡಿದ್ದನು . ಸುಲ್ತಾನ್ ಬತ್ತೇರಿ , ಕಾಞ೦ಗಾಡ್ ನ್ಯಾಯಾಲಯದಲ್ಲಿಯೂ ಈತ ಕಳವಿಗೆ ವಿಫಲ ಯತ್ನ ನಡೆಸಿದ್ದನು.
ನೀಲೇಶ್ವರ ಮದ್ಯದಂಗಡಿಗೆ ನುಗ್ಗಿ ಈತ ಕಳವು ಮಾಡಿದ್ದನು. ರಾಜ್ಯದ ವಿವಿಧೆಡೆಗಳಲ್ಲಾಗಿ ಹದಿನೈದಕ್ಕೂ ಅಧಿಕ ಸ್ಥಳಗಳಲ್ಲಿ ಕಳವು ನಡೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಹೊಸದುರ್ಗ , ನೀಲೇಶ್ವರ , ಚೋಮಲಾ , ಪಯಂಗಡಿ , ಕೊಯಿಲಾಂಡಿ , ಪಾಲಕ್ಕಾಡ್ ಕಸಬಾ , ಧರ್ಮಡ, ವೆಳ್ಳ೦ಮುಂಡ, ಸುಲ್ತಾನ್ ಬತ್ತೇರಿ , ನಾದಪುರಂ ಮೊದಲಾದ ಠಾಣೆ ಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ.
ಇವುಗಳಲ್ಲಿ ಅಂಚೆ ಕಚೇರಿ , ನ್ಯಾಯಾಲಯದಲ್ಲಿನ ಕಳವು ಒಳಗೊಂಡಿದೆ. ಪೊಲೀಸರು ಸಿ ಸಿ ಟಿ ವಿ ದ್ರಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯ ಸುಳಿವು ಲಭಿಸಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ