ಉಡುಪಿ, ಆ.07(DaijiworldNews/AK): 2024ಜುಲೈ 3 ರಿಂದ 7 ರವರೆಗೆ ಜಕಾರ್ತ್ದಲ್ಲಿ( Jakarta, Indonesia ) ನಡೆದ ಅಂತಾರಾಷ್ಟೀಯ ಅಂಚೆ ಚೀಟಿ ಪ್ರದರ್ಶನ ಸ್ಪರ್ಧೆಯಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಾಹಕರಾದ ಬ್ರಹ್ಮಾವರದ ಕುಮ್ರಗೋಡು ಗ್ರಾಮದ ಡೇನಿಯಲ್ ಮಂತೇರೊ, ಅವರು ಪ್ರದರ್ಶಿಸಿದ ʼನವಿಲುಗಳುʼ ಅಂಚೆ ಚೀಟಿ ಗಳಿಗೆ ಬೆಳ್ಳಿಯ ಪದಕ ಲಭಿಸಿದೆ.
ಇವರು ಈ ಹಿಂದೆ ನಡೆದ ಹಲವಾರು ಹಾಂಗ್ಕಾಂಗ್, ಚೀನ, ಕೋರಿಯಾ, ದಕ್ಷಿಣಆಫ್ರಿಕಾ, ಥೈಲಾಂಡ್, ನ್ಯೂಡೆಲ್ಲಿ, ಇಂಡೋನೇಶಿಯಾ, ಆಸ್ಟ್ರೀಯಾ, ಬೆಲ್ಜಿಯಂ, ಸಿಂಗಾಪುರ, ಮೆಕಾವೊ, ಬಾಂಗ್ಲಾದೇಶ, ದುಬೈ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ. ಇವರು ಪಕ್ಷಿಗಳ ಅಂಚೆ ಚೀಟಿ ಸಂಗ್ರಹದಲ್ಲಿ ಗಿನ್ನೆಸ್ ವಿಶ್ವದಾಖಲೆ ಮಾಡಿರುತ್ತಾರೆ. ಅಲ್ಲದೆ ಎರಡು ಲಿಮ್ಕಾ ದಾಖಲೆ, ಮೂರು ಇಂಡಿಯಾ ಬುಕ್ ಆಪ್ ರೆಕಾರ್ಡ್, ಯೂನಿಕ್ ವರ್ಲ್ಡ್ ರೆಕಾರ್ಡ್ ಮಾಡಿರುತ್ತಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ- ಪುರಸ್ಕಾರಗಳನ್ನು ಗಳಿಸಿದ ಮೊಂತೇರೊರವರು ದಕ್ಷಿಣ ಕನ್ನಡ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ ಮಂಗಳೂರು, ಮಣಿಪಾಲ ವಿಶ್ವವಿದ್ಯಾಲಯ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ ಮಣಿಪಾಲ, ಮತ್ತು ಕರ್ನಾಟಕ ಪಿಲಾಟೇಲಿಕ್ ಸೊಸೈಟಿ ಬೆಂಗಳೂರ ಸಕ್ರಿಯ ಸದಸ್ಯರಾಗಿದ್ದಾರೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನಗಳನ್ನು ನಡೆಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಡೇನಿಯಲ್ ಮೊಂತೇರೊ ರವರು ಪ್ರಮುಖ ಪಾತ್ರವಹಿಸಿದ್ದಾರೆ.