ಮಂಗಳೂರು, ಆ.06(DaijiworldNews/AA): ನಾಪತ್ತೆಯಾಗಿದ್ದ ಯುವತಿ ಕೆಲಿಸ್ತಾ ಫೆರಾವೊ(18) ಪತ್ತೆಯಾಗಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಯುವತಿಯು ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡು ಬಂದಿರುತ್ತೆ. ಜೊತೆಗೆ ಆಕೆ ತಂದೆ - ತಾಯಿಯೊಂದಿಗೆ ಹೋಗುವುದಿಲ್ಲವೆಂದ ಕಾರಣಕ್ಕೆ ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಜುಲೈ 30 ರಂದು ಬಿಜೈ ನಲ್ಲಿರುವ ತನ್ನ ಮನೆಯಿಂದ ಕೆಲಿಸ್ತಾ ಫೆರಾವೊ ಯುವತಿ ಮನೆಯಲ್ಲಿ ಯಾರಿಗೂ ತಿಳಿಸದೆ ಹೋಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಬರ್ಕೆ ಪೊಲೀಸ್ ಇನ್ಸ್ಪೆಕ್ಟರ್ ತಂಡ, ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಕಾಣೆಯಾದ ಹುಡುಗಿ ಈ ಹಿಂದೆ ಸಾಮಾಜಿಕ ಜಾಲತಾಣ ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಸುಮಾರು 3,000 ಇನ್ಸ್ಟಾಗ್ರಾಂ ಅಕೌಂಟ್ ಮತ್ತು ಮೋಜ್ ಆಪ್ ನ ಅಕೌಂಟ್ ಗಳನ್ನು ಪರಿಶೀಲಿಸಿದ್ದಾರೆ.
ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಕಾರ್ಕಳದ ಗಜೇಂದ್ರ ಬೈಲ್ ಗ್ರಾಮದ ಸೂರಜ್ ಪೂಜಾರಿ(23) ಎಂಬ ಯುವಕನ ಆತನ ಮನೆಯಲ್ಲಿ ಕೆಲಿಸ್ತಾ ಫೆರಾವೊ ಪತ್ತೆಯಾಗಿದ್ದಾಳೆ. ಅವರುಗಳನ್ನು ಬರ್ಕೆ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವುದಾಗಿ ತಿಳಿಸಿರುತ್ತಾರೆ.