ಕಾಸರಗೋಡು, ಆ.05(DaijiworldNews/AK):ಜಿಲ್ಲಾ ನ್ಯಾಯಾಲಯ ಸಮುಚ್ಛಯದೊಳಗೆ ಅಪರಚಿತ ವ್ಯಕ್ತಿಯೋರ್ವ ನುಗ್ಗಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕಾವಲುಗಾರ ನನ್ನು ಕಂಡು ಈತ ಪರಾರಿಯಾಗಿದ್ದಾನೆ.
ನ್ಯಾಯಾಲಯ ಕಟ್ಟಡದೊಳಗೆ ನುಗ್ಗಿದ ಈತ ಜಿಲ್ಲಾ ನ್ಯಾಯಾಧೀಶ ರವರ ಕಚೇರಿ ತನಕ ತೆರಳಿದ್ದು , ಈತನ ಬಳಿ ಕಬ್ಬಿಣದ ರಾಡ್ ಕಂಡು ಬಂದಿದೆ. ಈತ ಕಳವಿಗಾಗಿ ಬಂದಿದ್ದನೇ ಅಥವಾ ಕಡತಗಳನ್ನು ಕೊಂಡೊಯ್ಯುವ ಉದ್ದೇಶದಿಂದ ಒಳನುಗ್ಗಿದ್ದನೇ ಎಂಬ ಬಗ್ಗೆ ಸ್ಪಷ್ಟ ಗೊಂಡಿಲ್ಲ . ವಿದ್ಯಾನಗರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ಆರಂಭಿಸಿದ್ದಾರೆ.
ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ. ಸಿ ಸಿ ಟಿ ವಿ ದ್ರಶ್ಯ ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ