ಕಾರ್ಕಳ, ಆ 5 (DaijiworldNews/MS): ಮನೆ ಟೆರೆಸ್ ನಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ವೃದ್ಧರೊಬ್ಬರು ಬೆನ್ನು ಮೂಳೆ ಮುರಿದುಕೊಂಡ ಘಟನೆ ಮಿಯಾರ್ ಗ್ರಾಮದ ಬೋರ್ಕಟ್ಟೆಯ ಮನ್ನಡ್ಕ ಎಂಬಲ್ಲಿ ಸಂಭವಿಸಿದೆ.
ಗೋಪಾಲ ಶೆಟ್ಟಿ (74) ಎಂಬವರು ಘಟನೆಯಲ್ಲಿ ಗಾಯಗೊಂಡವರು. ಬೆಳಿಗ್ಗಿನ ಜಾವದಲ್ಲಿ ಅವರು ಮನೆಯ ಟೆರೆಸಿಗೆ ಹೋಗಿದ್ದರು.
ಮಳೆಗಾಲವಾಗಿದ್ದು ಟೆರೆಸಿನಲ್ಲಿ ಪಾಚಿಗಳು ತುಂಬಿಕೊಂಡಿರುವುದೇ ಕಾಲು ಜಾರಲು ಕಾರಣವೆನ್ನಲಾಗಿದೆ. ಘಟನೆ ನಡೆದ ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ವಾಸವಾಗಿದ್ದುದರಿಂದ ಬೆಳಿಗ್ಗೆ 9.30ಕ್ಕೆ ನೆರೆಮನೆಯ ಉಮೇಶ್ ಶೆಟ್ಟಿ ಎಂಬವರು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದರು. ಇದಾಗಿ ಕೇವಲ 20 ನಿಮಿಷದ ಅಂತರದಲ್ಲಿ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಅಗಮಿಸಿದೆ. ಪ್ರಥಮ ಚಿಕಿತ್ಸೆ ನೀಡುವ ಮೂಲಕ ಗಾಯಾಳುವನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
108 ಅಂಬುಲೆನ್ಸ್ ನ ಪೈಲೆಟ್ ಕೊಟ್ರಪ್ಪ ಜಿ , ಇ ಎಂ ಟಿ ದೇವಕಿ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಗಾಯಾಳುವಿನ ಯೋಗ ಕ್ಷೇಮ ವಿಚಾರಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.
108 ಅಂಬುಲೆನ್ಸ್ ಸೇವೆಗೆ ಮೆಚ್ಚುಗೆ
ತುರ್ತು ಕರೆ ಸ್ವೀಕರಿಸಿ ಘಟನಾ ಸ್ಥಳಕ್ಕೆ ತುರ್ತಾಗಿ ಅಗಮಿಸಿ ಗಾಯಾಳುವಿಗೆ ತುರ್ತು ಚಿಕಿತ್ಸೆನೀಡಿರುವ ಕಾರ್ಯ ಶ್ಲಾಘನೀಯ. ನಾಗರಿಕರು ಮುಂದಿನ ದಿನಗಳಲ್ಲೂ ಸರಕಾರ ಯೋಜನೆಗಳನ್ನು ಸದ್ಬಾಳಕೆ ಮಾಡಿಕೊಳ್ಳಬೇಕೆಂದು ಸ್ಥಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.