ಉಡುಪಿ, ಆ.04(DaijiworldNews/AK):ಪರಶುರಾಮ ಥೀಮ್ ಪಾರ್ಕ್ ಗೆ ಸಂಬಂಧಿಸಿದ ವಿಗ್ರಹ ಸೀಜ್ ವಿಚಾರ ಸಂಬಂಧಪಟ್ಟಂತೆ ಕ್ರಿಶ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕೆಂಗೇರಿಯ ಕ್ರಿಶ್ ಆರ್ಟ್ ವರ್ಲ್ಡ್ ನಿಂದ ಪರಶುರಾಮ ಥೀಮ್ ಪಾರ್ಕ್ ಗೆ ಸಂಬಂಧಿಸಿದ ಮೂರ್ತಿಯ ಬಿಡಿ ಭಾಗಗಳನ್ನ ವಶಕ್ಕೆ ಪಡೆದಿದ್ದ ಪೊಲೀಸರು ಮತ್ತೆ ಧರ್ಮದ ಅಸ್ತ್ರ ಹಿಡಿದು ಪೊಲೀಸರ ವಿರುದ್ಧವೆ ಗೂಬೆ ಕೂರಿಸಲು ಕೃಷ್ಣ ನಾಯಕ್ ಯತ್ನ ಅಧರ್ಮದ ಕೆಲಸ ಮಾಡಿದ್ದ ಕೃಷ್ಣ ನಾಯಕ್ ನಿಂದ ಮತ್ತೆ "ಧರ್ಮದ ಅಸ್ತ್ರ"? ಅನ್ಯ ಧರ್ಮಿಯರಿಂದ ಮೂರ್ತಿಯ ಭಾಗಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಕೃಷ್ಣ ನಾಯಕ್ ವಿರುದ್ಧ ಹೋರಾಟಗಾರ ವಿವೇಕ್ ಕಿಡಿಕಾರಿದ್ದಾರೆ.
ಏಕಾ ಏಕಿ ಪರಶುರಾಮನ ಮೂರ್ತಿಯನ್ನ ಕತ್ತರಿಸುವಾಗ ಎಲ್ಲಿ ಹೋಗಿತ್ತು ಹಿಂದುತ್ವ?ಕಂಚಿನ ಪ್ರತಿಮೆ ಎಂದು ಹೇಳಿ ಗ್ಲಾಸ್ ಫೈಬರ್ ಮೂರ್ತಿ ಅಳವಡಿಸುವಾಗ ಎಲ್ಲಿ ಹೋಗಿತ್ತು ಹಿಂದುತ್ವ ಎಂದು ಪ್ರಶ್ನೆಸಿದ್ದಾರೆ.ತಪಾಸಣೆಯ ಹೆಸರಿನಲ್ಲಿ ಮೂರ್ತಿಯನ್ನ ಸುತ್ತಿಗೆಯಿಂದ ಹೊಡೆದಾಗ ಎಲ್ಲಿ ಹೋಗಿತ್ತು ಹಿಂದುತ್ವ?ಪರಶುರಾಮ ಥೀಮ್ ಪಾರ್ಕ್ ಹಗರಣ ಹೋರಾಟಗಾರ ವಿವೇಕ್ ಪ್ರಶ್ನೆ ಮಾಡಿದ್ದಾರೆ.
ಥೀಮ್ ಪಾರ್ಕ್ ಹಗರಣದಲ್ಲಿ ಕೃಷ್ಣ ನಾಯಕ್ ಪ್ರೈಮ್ ಸಸ್ಪೆಕ್ಟ್ ಕೂಡಲೇ ಪೊಲೀಸರು ಕೃಷ್ಣ ನಾಯಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಅಗ್ರಹಿಸಿದರು.ಇದೀಗ ಕಾರ್ಕಳಕ್ಕೆ ಪರಶುರಾಮ ಮೂರ್ತಿಯ ಬಿಡಭಾಗಗಳು ತಲುಪಿವೆ. ಕಾರ್ಕಳ ಪೊಲೀಸ್ ಠಾಣೆಯ ಕ್ವಾರ್ಟರ್ಸ್ ಬದಿಯಲ್ಲಿ ಪರಶುರಾಮನ ವಿಗ್ರಹದ ಬಿಡಿಭಾಗಗಳನ್ನು ಪೊಲೀಸರು ಇಳಿಸಿದ್ದಾರೆ.
ಮಾಧ್ಯಮಗಳ ಕಣ್ಣು ತಪ್ಪಿಸಿ ಮೂರ್ತಿ ವಿಲೇವಾರಿ ಮಾಡಲಾಗಿದ್ದು, ಇದೀಗ ಸಿಸಿ ಟಿವಿಯಲ್ಲಿ ಕಣ್ಣಗ್ಗಾವಲಿನಲ್ಲಿ ಪರಶುರಾಮ ವಿಗ್ರಹ ಇಡಲಾಗಿದೆ. ಪರಶುರಾಮನ ವಿಗ್ರಹಕ್ಕೆ ಪೊಲೀಸರಿಂದ ಸರ್ಪಗಾವಲು ಹಾಕಲಾಗಿದ್ದು, ಟಾರ್ಪಲು ಹೋದಿಸಿ ವಿಗ್ರಹ ಕಾಣದಂತೆ ಪೊಲೀಸರು ಮುಚ್ಚಿದ್ದಾರೆ. ಆದರೆ ವಶಕ್ಕೆ ಪಡೆದ ವಿಗ್ರಹ ಅಸಲಿಯೋ ನಕಲಿಯೂ ಇನ್ನು ಗೊಂದಲವಾಗಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್ ಹಾಗೂ ಸದ್ಯರು, ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಬಂದೋಬಸ್ತ್ ಮಾಡಿದ್ದರು.