ಬಂಟ್ವಾಳ, ಆ.04(DaijiworldNews/AA): ದೇವಸ್ಥಾನದ ಅರ್ಚಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈತ್ತೋಡಿ ಗ್ರಾಮದ ದೊಡ್ಡದಳಿಕೆ ನಿವಾಸಿ ಹರೀಶ್ ಪೂಜಾರಿ (40) ನಾಪತ್ತೆಯಾದ ವ್ಯಕ್ತಿ.
ಕೇಶವ ಪೂಜಾರಿ ಅವರು ಹರೀಶ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಹರೀಶ್ ಮೇ 30 ರಂದು ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿಲ್ಲ ಎಂದು ತಿಳಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.