ಉಡುಪಿ, , ಆ.04(DaijiworldNews/AK):ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕರ್ನಾಟಕ ಚಾಪ್ಟರ್ ಇದರ ಉಡುಪಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆ ಆಯ್ಕೆಯಾಗಿದ್ದಾರೆ.
ಶಾಮ್ ರಾಜ್ ಬಿರ್ತಿ ಮತ್ತು ನಜ್ಮಾ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಲಾವುದ್ದೀನ್, ಜಂಟಿ ಕಾರ್ಯದರ್ಶಿಯಾಗಿ ಪ್ರಶಾಂತ್ ಮೊಗವೀರ, ಖಜಾಂಚಿಯಾಗಿ ಮುಜಾಹಿದ್ ಅಲಿ ನಾವುಂದ ಮತ್ತು ಸಂವಹನ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಶಾರುಖ್ ತೀರ್ಥಹಳ್ಳಿ ಆಯ್ಕೆಯಾದರು.
ನೂತನ ಸಲಹಾ ಸಮಿತಿ ಸದಸ್ಯರಾಗಿ ರಿಯಾಝ್ ಕೋಡಿ, ನ್ಯಾಯವಾದಿ ಅಸಾದುಲ್ಲಾ, ರಿಹಾನ್ ತ್ರಾಸಿ, ನ್ಯಾಯವಾದಿ ಮಂಜುನಾಥ ಗಿಳಿಯಾರ್, ದಿನಕರ ಬೆಂಗ್ರೆ, ವಕೀಲ ರಘು, ತಾಜುದ್ದೀನ್, ಮುನೀರ್ ಕಂಡ್ಲೂರು, ಇದ್ರೀಸ್ ಹೂಡೆ, ನ್ಯಾಯವಾದಿ ಅಫ್ವಾನ್ ಹೂಡೆ, ಮುಹಮ್ಮದ್ ತೌಫೀಕ್ ಗಂಗೊಳ್ಳಿ, ಸಿದ್ದಿಕರ್ ನೇಗಾರ, ಸಿದ್ದಿಕರ್ ನೇಗಾರ್ ಅಯ್ಯನ್ ಮಲ್ಪೆ, ಸಮೀರ್, ಸಿಮ್ರಾನ್ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಅಧಿಕಾರದ ಆಸೆ ಬೇಡ, ಬಂದ ಅಧಿಕಾರವನ್ನು ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ನಿಭಾಯಿಸಬೇಕು, ಸಮಾಜದಲ್ಲಿ ತುಳಿತಕ್ಕೊಳಗಾದ ಹಾಗೂ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎ.ಪಿ.ಸಿ.ಆರ್. ಕಳೆದ ಇಪ್ಪತ್ತು ವರ್ಷಗಳಿಂದ ಮತ್ತು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು
ಈ ಸಂದರ್ಭದಲ್ಲಿ ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ವಸೀಂ ಅಬ್ದುಲ್ಲ ಉಪಸ್ಥಿತರಿದ್ದರು.